ತೀರ್ಥಹಳ್ಳಿ: ಆಗುಂಬೆ ಸಮೀಪದ ಮಲ್ಲಂದೂರಿನಲ್ಲಿ ಸುಮಾರು 9 ವರ್ಷ ದಿಂದ ಆನೆ ದಾಳಿಯಿಂದ ರೈತರು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದು, ಪ್ರತಿ ವರ್ಷ ತೋಟ ಗದ್ದೆಗಳಿಗೆ ಬಂದು ಬೆಳೆಗಳನ್ನು ನಾಶ ಮಾಡುತ್ತಿದೆ. ಒಮ್ಮೆ ಒಬ್ಬ ರೈತರ ಮೇಲೆ ದಾಳಿ ಮಾಡಿ ಸಾಯಿಸಿದಲ್ಲದೆ, ಪ್ರತಿ ವರ್ಷ ಸುಮಾರು 3-4 ಲಕ್ಷ ರೂಪಾಯಿಗಳು ರೈತರಿಗೆ ನಷ್ಟ ಮಾಡುತ್ತಾ ಇದ್ದು ಹಾಗೂ ಪರಿಸರದ ಮೇಲೆ ಅವಲಂಬಿತರಾಗಿರುವ ರೈತರಿಗೆ ಪರಿಸದ ಅನುಕೂಲ ಪಡೆದು ಕೊಳ್ಳಲೂ ಸಾಧ್ಯವಾಗದೆ ಸಮಸ್ಯೆ ಯಲ್ಲಿ ಸಿಲುಕಿದ್ದಾರೆ,
ಅಲ್ಲದೆ ಮಲ್ಲಂದೂರು, ಸಮೀಪದ ಆಗುಂಬೆ ಎಲ್ಲಾ ಕಾರ್ಯಗಳಿಗೂ ಅವಲಂಬನೆ ಆಗಿದ್ದು ಕಳೆದ ಒಂದು ವಾರದಿಂದ ಆನೆ ಅದೇ ರಸ್ತೆ ಯಲ್ಲಿಯೇ ಹಗಲು ರಾತ್ರಿ ಎನ್ನದೆ ಸಂಚರಿಸುತ್ತಿದ್ದು ಗ್ರಾಮಸ್ಥರಿಗೆ ಆಗುಂಬೆಗೆ ಸಂಪರ್ಕಿಸಲು ಆಗದೆ ಬದಲಿ ರಸ್ತೆಯು ಇಲ್ಲದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ, ರಸ್ತೆ ಪಕ್ಕದಲ್ಲಿ ಮರವನ್ನು ಕೆಡವಿ ಅದು ಕರೆಂಟ್ ಲೈನ್ ಮೇಲೆ ಬಿದ್ದು ಊರಿಗೇ ಕರೆಂಟ್ ಸಂಪರ್ಕ ಇಲ್ಲದೆ ಕತ್ತಲೆ ಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಗ್ರಾಮೀಣ ಪ್ರದೇಶದ ಮಲ್ಲಂದೂರಿನಲ್ಲಿ ಕಂಡು ಬರುತ್ತಿದ್ದು, ಗ್ರಾಮಸ್ಥರು ಅಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಎಷ್ಟೇ ಮನವಿ ಮಾಡಿದರು ಸೂಕ್ತ ಪರಿಹಾರ ಒದಗಿಸದೆ ಒಬ್ಬರ ಮೇಲೆ ಒಬ್ಬರು ಬೊಟ್ಟು ತೋರಿಸುತ್ತಾ ಕಾಲಹರಣ ಮಾಡುತಿದ್ದಾರೆ,
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನೆಡೆಸುವ, ಇಲ್ಲಾ ದಯಾ ಮರಣ ಕೋರಿ ರಾಷ್ಟ್ರಪತಿ ಯವರಿಗೆ ಅರ್ಜಿ ಸಲ್ಲಿಸುವ ತೀರ್ಮಾನ ಕೈಗೊಂಡಿರುತ್ತಾರೆ.
ಇದನ್ನೂ ಓದಿ:ನೋಡು ನೋಡುತ್ತಲೆ ಕುಸಿದು ಬಿದ್ದ ಬ್ರಿಡ್ಜ್ : ವಿಡಿಯೋ ಇಲ್ಲಿದೆ ನೋಡಿ
ಪ್ರಕೃತಿ ಯೊಂದಿಗೆ ಜೀವನ ಸಾಗಿಸುತಿದ್ದ ಗ್ರಾಮಸ್ಥರು ಪ್ರಾಣಿಗಳ ಹಾವಳಿ, ಅರಣ್ಯ ಅಧಿಕಾರಿಗಳ ಕಾನೂನಿನ ಹೆಸರಲ್ಲಿ ಮಾಡುವ ಶೋಷಣೆಯಿಂದ ಬೇಸತ್ತು ಸರ್ಕಾರಕ್ಕೆ ಪುನರ್ವಸತಿ ಕಲ್ಪಿಸಲು ಮನವಿ ಮಾಡಿರುತ್ತಾರೆ, ಅತೀ ಸಣ್ಣ ರೈತರಾಗಿರುವ ಇವರು ಪ್ರತಿ ಕುಟುಂಬಕ್ಕೆ 50 ಲಕ್ಷ ಹಾಗೂ ನಂತರದಲ್ಲಿ ಅವರ ಆಸ್ತಿ ಗಳಿಗೆ ಬೆಲೆ ಕಟ್ಟಿ ಪುನರ್ವಸತಿ ಕಲ್ಪಿಸಬೇಕಾಗಿ ಕೇಳಿದ್ದಾರೆ,
ಇಲ್ಲವೇ ಮುಂದಿನ ದಿನಗಳಲ್ಲಿ ಅವರು ಯಾವುದೇ ಚುನಾವಣೆ ಪಕ್ರಿಯೆಯಲ್ಲಿ ಭಾಗವಹಿಸದೆ ಯಾವುದೇ ಅರಣ್ಯ ಅಧಿಕಾರಿಗಳನ್ನು ಗ್ರಾಮಕ್ಕೆ ಸೇರಿಸದೆ ತಮ್ಮ ಹೋರಾಟ ಮುಂದುವರಿಸುತ್ತಾರೆ ಎಂದು ಮಲ್ಲಂದೂರಿನ ಗ್ರಾಮಸ್ಥರು ತಿಳಿಸಿದ್ದಾರೆ.