Advertisement

ದೈವಸ್ಥಾನ ವಠಾರದಲ್ಲಿ ಕ್ರಿಕೆಟ್ ಆಡಿದ್ದಕ್ಕೆ ಆಕ್ಷೇಪ: ಮಾತುಕತೆ ಮೂಲಕ ಪ್ರಕರಣ ಸುಖಾಂತ್ಯ

06:21 PM Jul 14, 2021 | Team Udayavani |

ಸುಳ್ಯ: ಇಲ್ಲಿನ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ  ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಪ್ರತಿಭಟಿಸಿದರು. ದೈವಸ್ಥಾನ ಆಡಳಿತ ಮಂಡಳಿಯ ಪ್ರವೀಣ್ ಜಯನಗರ ಎಂಬವರು ಮಾತನಾಡಿ ಕ್ರಿಕೆಟ್ ಆಡಲು ಇಲ್ಲಿ ಅವಕಾಶವಿಲ್ಲ ಎಂದದ್ದಕ್ಕೆ ನಾವೂ ಹಿಂದುಗಳು ಎಂದು ಯುವಕರು ಮರು ಉತ್ತರಿಸಿದ್ದಾರೆ. ಇದರಿಂದ ಪ್ರವೀಣ್ ಅವರು ಇಲ್ಲ ಇಲ್ಲಿ ಕ್ರಿಶ್ಚಿಯನ್ ಕೂಡ ಇದ್ದಾರೆ ಎಂದು ಕ್ರಿಶ್ಚಿಯನ್ ಯುವಕನಿಗೆ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದು ಧರ್ಮ ದ್ವೇಷ ಬಿತ್ತುವ ಮಾತು ಎಂದು ಕ್ರಿಕೆಟ್ ಆಡುವ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಐಸಿಯುನಲ್ಲಿ ಪುಟ್ಟ ಕಂದ: ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ನಟಿ ದಿಯಾ

ಬಳಿಕ ಪೊಲೀಸ್ ಠಾಣೆಗೆ ಎರಡೂ ತಂಡಗಳು ತೆರಳಿ ಮುಂದೆ ಈ ರೀತಿ ಆಗುವುದಿಲ್ಲ. ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುವ ಕ್ರಮ ಸರಿಯಲ್ಲ ಎಂಬ ಕುರಿತು ಮೊದಲೇ ಸಾರ್ವಜನಿಕವಾಗಿ ನಿರ್ಧಾರವಾಗಿದ್ದರೂ ಆಟ ಆಡಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಧರ್ಮ ದ್ವೇಷ ಬಿತ್ತುವ ಉದ್ದೇಶ ನಮಗಿರಲಿಲ್ಲ ಎಂದು ಪ್ರವೀಣ್ ಅವರು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.

ಸದ್ಯ ಮಾತುಕತೆಯಲ್ಲಿ  ಈ ಪ್ರಕರಣ ಸುಖಾಂತ್ಯ ಕಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next