ವಿಟ್ಲ: ದ್ವಿಚಕ್ರವಾಹನವೊಂದಕ್ಕೆ ರಿಕ್ಷಾ ಢಿಕ್ಕಿಯಾಗಿ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಮಾಣಿಯಲ್ಲಿ ಸಂಭವಿಸಿದೆ.
ಪುತ್ತೂರು ಕಡೆಗೆ ಅತಿ ವೇಗವಾಗಿ ಚಲಾಯಿಸುತ್ತಿದ್ದ ರಿಕ್ಷಾ ಬಿಸಿರೋಡು ಕಡೆಗೆ ಬರುತ್ತಿದ್ದ ಸ್ಕೂಟರ್ ಸವಾರನಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ರಿಕ್ಷಾ ಅಲ್ಲೇ ಹತ್ತಿರದ ಹೂ ಮಾರಾಟದ ಅಂಗಡಿ ಬಳಿ ಬಂದು ನಿಯಂತ್ರಣ ಕಳೆದು ಬದಿಗೆ ವಾಲಿ ನಿಂತಿದೆ. ಸ್ಕೂಟರ್ ರಸ್ತೆ ಮಧ್ಯೆ ಮಗುಚಿ ಬಿದ್ದಿದೆ. ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೆಕೆಆರ್ ತಂಡಕ್ಕೆ ಮತ್ತೆ ದಿನೇಶ್ ಕಾರ್ತಿಕ್ ನಾಯಕತ್ವ? ಸುಳಿವು ಬಿಚ್ಚಿಟ್ಟ ವಿಕೆಟ್ ಕೀಪರ್
ಮಾಣಿ ಜಂಕ್ಷನ್ ನಲ್ಲಿ ಪ್ಲಾಸ್ಟಿಕ್ ನಿರ್ಮಿತ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಆದರೆ ಲಾಕ್ ಡೌನ್ ಅವಧಿಯಲ್ಲಿ ರಾತ್ರಿ ವೇಳೆ ಘನಗಾತ್ರದ ವಾಹನಗಳು ಇದರ ಮೇಲೆಯೇ ವಾಹನ ಹರಿಸಿ ಬ್ಯಾರಿಕೇಡ್ ಗಳು ಪುಡಿಪುಡಿಯಾಗಿವೆ.