Advertisement

ಉಡುಪಿ: ನಗರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಮಾರಣಾಂತಿಕ ಹಲ್ಲೆ

09:06 PM Dec 15, 2022 | Team Udayavani |

ಉಡುಪಿ: ಅಲೆವೂರು ಸಮೀಪದ ಮಂಚಿ ಬಳಿ ಗುರುವಾರ ಮನೆಗೆ ನುಗ್ಗಿದ ಯುವಕನೊಬ್ಬ ನಗರಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ ಅವರ ಪತಿ ಕೃಷ್ಣ ನಾಯ್ಕ(54) ಅವರಿಗೆ ಮಾರಾಕಾಯುಧದಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

Advertisement

ಆರೋಪಿ ಅರ್ಜುನ್‌ ಏಕಾಏಕಿ ಮನೆಗೆ ನುಗ್ಗಿ ಕೃಷ್ಣ ನಾಯ್ಕ ಅವರಿಗೆ ಕಬ್ಬಿಣ ಸಲಾಕೆಯಿಂದ ಇರಿದು ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರಗಾಯಗೊಂಡಿರುವ ಕೃಷ್ಣ ನಾಯ್ಕ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅರ್ಜುನ್‌ ಕೂಡ ಗಾಯಗೊಂಡಿದ್ದಾನೆ.

ಘಟನೆಯಿಂದ ಮನೆಯ ಒಳಭಾಗದಲ್ಲಿ ಅಪಾರಪ್ರಮಾಣದಲ್ಲಿ ನೆತ್ತರು ಹರಿದಿದೆ. ಬಳಿಕ ಪೊಲೀಸರು ಆಗಮಿಸಿ ಕೃಷ್ಣನಾಯ್ಕ ಹಾಗೂ ಆರೋಪಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವರ್ಷದ ಹಿಂದೆ ಗೃಹಪ್ರವೇಶ:

ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ನಾಯ್ಕ ಅವರು ವರ್ಷದ ಹಿಂದಷ್ಟೇ ನೂತನ ಮನೆ ನಿರ್ಮಾಣ ಮಾಡಿದ್ದರು.

Advertisement

ಕಾರಣ ನಿಗೂಢ:

ಆರೋಪಿ ಅರ್ಜುನ್‌ ಪದವೀಧರನಾಗಿದ್ದು, ನೆರೆಮನೆಯವನಾಗಿದ್ದಾನೆ. ಕೆಲಸ ಸಂಬಂಧ ಹೊರ ಊರಿನಲ್ಲಿದ್ದ ಆತ ಇತ್ತೀಚೆಗಷ್ಟೇ ಇಲ್ಲಿಗೆ ಆಗಮಿಸಿದ್ದ. ಆದರೆ ಹಲ್ಲೆಗೆ ನಿಖರ ಕಾರಣ ಏನೆಂಬುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನ ಸ್ಥಳಕ್ಕೆ ಮಣಿಪಾಲ ಪೊಲೀಸ್‌ ಠಾಣೆಯ ನಿರೀಕ್ಷಕರಾದ ದೇವರಾಜ ಟಿ.ವಿ.ಸಹಿತ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next