ಸಿದ್ದಾಪುರ (ಉ. ಕ.) : ಕೆರೆ ಬೇಟೆ (ಮೀನು ಬೇಟೆ ) ಯಲ್ಲಿ ಮೀನು ಸಿಗದ ಕಾರಣಕ್ಕೆ ಜನರು ರೊಚಿಗೆದ್ದು ಪೊಲೀಸರು,ಆಯೋಜಕರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಭಾನುವಾರ (ಮೇ 29) ನಡೆದಿದೆ.
ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಈಶ್ವರ ದೇವಸ್ಥಾನದ ಸಹಾಯರ್ಥಕ್ಕಾಗಿ ಕೆರೆ ಮೀನು ಬೇಟೆಯನ್ನು ಆಯೋಜಿಸಲಾಗಿತ್ತು. ಕೆರೆಬೇಟೆಯಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಗೂ ಪ್ರವೇಶ 600 ರೂ. ಶುಲ್ಕ ವಿಧಿಸಲಾಗಿತ್ತು. ಸುಮಾರು 6 -8 ರಿಂದ ಜನರು ಮೀನು ಬೇಟೆಯಲ್ಲಿ ಭಾಗಿಯಾಗಿದ್ದರು.
ಸುಮಾರು ಹೊತ್ತು ಮೀನು ಬೇಟೆಯಲ್ಲಿದ್ದ ಜನರಿಗೆ ಮೀನು ಸಿಗದ ಕಾರಣಕ್ಕೆ, ಜನರು ಆಕ್ರೋಶಗೊಂಡು ಸ್ಥಳೀಯ ದೇವಸ್ಥಾನದ ಕಮಿಟಿ ಸದಸ್ಯರಿಗೆ ಹಾಗೂ ಬಂದೋಬಸ್ತ್ ಗೆಂದು ಬಂದಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ರಾದ್ಧಾಂತ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲಾಗದೆ ಪೊಲೀಸರು, ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಲಾಠಿ ಚಾರ್ಜ್ ಮಾಡಿ ಜನರನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದು ಬಂದಿದೆ.