ಪಾವಗಡ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ಘಟನೆ ಶುಕ್ರವಾರ ನಡೆದಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಡ್‌ಗಳು ಖಾಲಿ ಇರಲಿಲ್ಲ: ಪ್ರತಿ ತಿಂಗಳಿ ಗೊಮ್ಮೆ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಯಲಿದ್ದು, ತುಮಕೂರಿ ನಿಂದ ವೈದ್ಯರು ಆಗಮಿಸಿ ಈ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಿದ್ದಾರೆ. ಅದೇ ರೀತಿ ಶುಕ್ರವಾರ ಸುಮಾರು 28 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಬೆಡ್‌ಗಳು ತುಂಬಿದ್ದರಿಂದ ಬೆಡ್ ಗಳು ಖಾಲಿ ಇಲ್ಲದೇ ನೆಲದ ಮೇಲೆ ಮಲಗಿಸಲಾಗಿದ್ದು, ಈ ದೃಶ್ಯವನ್ನು ಶಸ್ತ್ರಚಿಕಿತ್ಸೆಗೆ ಒಳಗಾದವರ ಸಂಬಂಧಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಕೆಲ ಸಮಯ ವಿಶ್ರಾಂತಿ ಪಡೆಯಬೇಕಾಗಿದೆ. ಬೆಡ್ ಗಳು ಇಲ್ಲದ ಕಾರಣ ವಿಧಿ ಇಲ್ಲದೇ ನೆಲದ ಮೇಲೆಯೇ ಮಲಗಿದ್ದಾರೆ. ಈ ದೃಶ್ಯ ನೋಡಿದ ಪ್ರತಿಯೊಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ವಾರ್ಡ್‌ಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಸಿದ್ದು, ಈ ವೇಳೆ ಸ್ಥಳದ ಕೊರತೆಯಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ 13 ಕೋಟಿ ರೂ. ವೆಚ್ಚದ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಗಿಯಲಿದ್ದು, ಬಳಿಕ ಎಲ್ಲವೂ ಸರಿ ಹೋಗಲಿದೆ. -ಡಾ.ಕಿರಣ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗಳು
ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಗಳು ಇಲ್ಲದ ಕಾರಣ ಪದೇ ಪದೆ ಇಂತಹ ಘಟನೆಗಳು ಜರುಗುತ್ತಿವೆ. ಸ್ಕ್ಯಾನಿಂಗ್ ಮಾಡಿಸಲು ಸಹ ಗರ್ಭಿಣಿ ಯರು ಇದೇ ರೀತಿ ಪರದಾಡಬೇಕಿದೆ. ಅಧಿ ಕಾರಿಗಳು, ಶಾಸಕರು, ಕೇಂದ್ರ ಸಚಿವರು ಇನ್ನೂ ಹೆಚ್ಚು ಅನುದಾನ ನೀಡಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಬೇಕು
. – ಶಶಿಕಿರಣ್ ಮಾನಂ, ಹೆಲ್ಪ್ ಸೊಸೈಟಿ ಪಾವಗಡ
ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆಗಳು ಸಿಗುತ್ತಿವೆ. ಆದರೆ ನಮ್ಮ ತಾಲೂಕಿಗೆ ಸುತ್ತಮುತ್ತ ಆಂಧ್ರ ಪ್ರದೇಶ ಗಡಿ ಹೊಂದಿರುವುದರಿಂದ ಆಂಧ್ರದಿಂದ ಬರುವ ರೋಗಿಗಳ ಸಂಖ್ಯೆ ಜಾಸ್ತಿ ಯಾಗಿದ್ದರಿಂದ ನಮ್ಮ ತಾಲೂಕಿನ ಜನತೆಗೆ ಕಷ್ಟವಾಗುತ್ತಿದೆ.
-ರವಿಕುಮಾರ್, ಪಾವಗಡ ನಿವಾಸಿ