Advertisement

ಮೂಡುಬಿದಿರೆ : ಕಲ್ಲಮುಂಡ್ಕೂರು ಪಿದ್ಮಲೆಯ ಗುಡ್ಡಗಾಡು ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ  

03:52 PM Apr 25, 2021 | Team Udayavani |

ಮೂಡುಬಿದಿರೆ : ಕಲ್ಲಮುಂಡ್ಕೂರು ಪಿದ್ಮಲೆಯ  ಗುಡ್ಡಗಾಡು ಪ್ರದೇಶದ ಸುಮಾರು ಮೂವತ್ತು ಎಕರೆ ಜಾಗದಲ್ಲಿ ರವಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ  ಕಾಣಿಸಿಕೊಂಡಿದೆ.

Advertisement

ಅಗ್ನಿ ಶಾಮಕ ದಳದ ನೀರಿನ ಟ್ಯಾಂಕರ್ ಗಳ ಗಾಲಿಗಳು ಸವೆದು ಹೋಗಿ ಹರಿದುಕೊಂಡಿರುವ ಕಾರಣ ಬೆಂಕಿ‌ ಇರುವಲ್ಲಿಗೆ ವಾಹನ ಹೋಗಲಾಗುತ್ತಿಲ್ಲ ಎನ್ನಲಾಗಿದೆ. ಇದು ಮೀಸಲು ಅರಣ್ಯವಾಗಿರುವುದರಿಂದ ಕಲ್ಲಮುಂಡ್ಕೂರು ಮತ್ತು ತೆಂಕಮಿಜಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 200 ಎಕ್ರೆ ಯಲ್ಲಿ ಹರಡಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಮಾಹಿತಿ ಅರಣ್ಯ ಇಲಾಖೆಗೂ ಲಭಿಸಿದ್ದು ಡಿಆರ್ ಎಫ್ ಓ ಸಹಿತ ಸಿಬಂದಿ ಗಳು, ಅಗ್ನಿ ಶಾಮಕರು, ವಿಶೇಷವಾಗಿ ಊರವರು ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ.

ಇಲ್ಲಿಗೆ ಬಂದಿರುವ ಅಗ್ನಿಶಾಮಕ ದಳದ ಟ್ಯಾಂಕರ್ ನ ಟಯರ್ ಗಳು ನಡುವಲ್ಲೇ ಬಾಯಿ ಬಿಟ್ಟು ಕೊಂಡಿವೆ, 4,500 ಲೀ. ನೀರನ್ನು ಹೀರಿಕೊಂಡ ಈ ಟ್ಯಾಂಕರ್ ನ ಚಲಾವಣೆ ಬಹಳ ರಿಸ್ಕ್ ಎನ್ನಲಾಗುತ್ತಿದೆ. ಈ ಟ್ಯಾಂಕರ್ ಪುತ್ತೂರಿನದೆಂದೂ ಮೂಡುಬಿದಿರೆ ಗೆ ಬಂದಿದ್ದ ಹೊಸ ಟ್ಯಾಂಕರ್ ಪುತ್ತೂರಿಗೆ ಹೋಗಿದೆಯೆಂದೂ ಹೇಳಲಾಗುತ್ತಿದೆ.

Advertisement

ಅರಣ್ಯ ಇಲಾಖೆಯವರು ಹೇಳುವಂತೆ  “ಅಕೇಶಿಯ ನೆಟ್ಟಿರುವಲ್ಲಿ , ಹುಲ್ಲು ಬೆಳೆದಲ್ಲಿ ಈ ರೀತಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇಲಾಖಾ ಸಿಬಂದಿ, ಮೂಡುಬಿದಿರೆ ಅಗ್ನಿಶಾಮಕದಳದವರು ಸ್ಥಳದಲ್ಲಿದ್ದು ಪರಿಸ್ಥಿತಿ ಯನ್ನು ನಿಭಾಯಿಸುತ್ತಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next