Advertisement

ಮಂಗಳೂರು: ಮಾಸ್ಕ್ ಹಾಕದ ವೈದ್ಯ ; ತರಾಟೆಗೆ ತೆಗೆದುಕೊಂಡ ಸೂಪರ್ ಮಾರ್ಕೆಟ್ ಸಿಬ್ಬಂದಿ

03:29 PM May 19, 2021 | Team Udayavani |

ಮಂಗಳೂರು : ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘಿಸಿದ  ವೈದ್ಯರೊಬ್ಬರನ್ನು ಸೂಪರ್ ಮಾರ್ಕೆಟ್ ಸಿಬ್ಬಂದಿಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

Advertisement

ಮಂಗಳವಾರ ( ಮೇ 18) ಬೆಳಗ್ಗೆ ನಗರದ ಸೂಪರ್ ಮಾರ್ಕೆಟ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಫೋನಿನಲ್ಲಿ ಮಾತಾಡುತ್ತಾ ಇದ್ದ ವೈದ್ಯರೊಬ್ಬರು ಮಾಸ್ಕ್ ಹಾಕದೆ ಬಿಲ್ ಕೌಂಟರ್  ಬಳಿ ನಿಂತಿದ್ದರು. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಯೊಬ್ಬರು ವೈದ್ಯನಿಗೆ ಕೋವಿಡ್ ನಿಯಮದ ಬಗ್ಗೆ ಪಾಠ ಮಾಡಿದ್ದಾರೆ.

ಇದನ್ನೂ ಓದಿ : ಕಾಳಿ ನದಿ ಸೆಳವಿಗೆ ಸಿಕ್ಕ ವೃದ್ಧ: ಮೂರು ದಿನ ಮರದ ಟೊಂಗೆ ಹಿಡಿದು ಬದುಕಿ ಬಂದ.!

ದಯವಿಟ್ಟು ಮಾಸ್ಕ್ ಧರಿಸಿ, ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರುವುದು ಎಂದಿದ್ದಾನೆ. ಇದಕ್ಕೆ ವೈದ್ಯ ಮತ್ತೆ ವಾಗ್ವಾದಕ್ಕೆ ಇಳಿದು, ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಕುರಿತು ವೈದ್ಯ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next