ಮಡಿಕೇರಿ: ಮಾನಸಿಕ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ವೀರಾಜಪೇಟೆ ಪಟ್ಟಣ ಠಾಣಾ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಆತ ಮಡಿಕೇರಿಯಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆಯ ರಾಯ್ ಡಿ’ಸೋಜಾ (50) ಮೃತಪಟ್ಟವರು. ಪೊಲೀಸರ ವಿರುದ್ಧ ವಿವಿಧ ರಾಜಕೀಯಪಕ್ಷಗಳು ಹಾಗೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ಮೃತರ ಸಹೋದರ ರಾಬಿನ್ ಡಿ’ಸೋಜಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು,ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಘಟನೆ ವಿವರ: ಹಲವು ಸಮಯದಿಂದ ಮಾನಸಿಕಅಸ್ವಸ್ಥತೆ ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದರಾಯ್ ಡಿ’ಸೋಜಾ ಅವರು ಜೂ. 9ರ ರಾತ್ರಿ ಮನೆಯಿಂದ ಹೊರ ಹೋಗಿ ರಸ್ತೆಯಲ್ಲಿ ಕತ್ತಿ ಹಿಡಿದು ತಿರುಗಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬೀಟ್ ಪೊಲೀಸರ ಮೇಲೆ ರಾಯ್ ಕತ್ತಿ ಬೀಸಿದ್ದು, ಪೊಲೀಸ್‌ಪೇದೆಯೊಬ್ಬರ ಕೈಗೆ ಗಾಯವಾಗಿದೆ ಎನ್ನಲಾಗಿದೆ.
ಪೊಲೀಸರು ರಾಯ್ ಡಿ’ಸೋಜಾರನ್ನು ಠಾಣೆಗೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ರಾಯ್ ಅವರ ತಾಯಿ ಮೆಟೆಲ್ಡಾ ಲೋಬೊ ಅವರನ್ನು ಕರೆಯಿಸಿ ಮಗನನ್ನು ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.ಮನೆಗೆ ಬಂದ ಬಳಿಕ ದೇಹವನ್ನು ಪರಿಶೀಲಿಸಿದಾಗ ಗಾಯದ ಗುರುತು ಗಳು ಕಂಡು ಬಂದಿದೆ.
ಹೀಗಾಗಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲುಮತ್ತು ಸಾರ್ವಜನಿಕರು ಹಲ್ಲೆ ನಡಸಿದ್ದಾರೆಂದು ದೂರು ನೀಡುವಂತೆ ಮೆಟೆಲ್ಡಾ ಲೋಬೊ ಅವರಿಗೆ ಒತ್ತಡ ಹೇರಿದ್ದಾರೆಂದು ಆರೋಪಿಸಲಾಗಿದೆ. ಈ ನಡುವೆ ಜೂ.12ರಂದು ರಾಯ್ ಡಿ’ಸೋಜಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತೀವ್ರ ಅಸಮಾಧಾನ :
ಮಾನಸಿಕ ರೋಗಿಯನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಪೊಲೀಸರು ರಾಯ್ ಡಿ’ಸೋಜಾ ಅವರ ಸಾವಿಗೆ ಕಾರಣ ಕರ್ತರಾಗಿ ದ್ದಾರೆ ಎಂದು ಕ್ರೈಸ್ತ ಸಮಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತನಿಖೆ ಬಳಿಕ ಕ್ರಮ :
ಕಾನೂನು ಪ್ರಕಾರವೇ ತನಿಖೆ ನಡೆಯಲಿದೆ. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವಿಚಾರದ ಬಗ್ಗೆಯೂ ತನಿಖೆ ನಡೆಯಲಿದೆ. ತನಿಖೆಯ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ತಿಳಿಸಿದ್ದಾರೆ.