Advertisement

“ಕುಡಿತ ಬಿಟ್ಟು ಬಿಡಪ್ಪ” ; ಮಕ್ಕಳ ಬುದ್ಧಿವಾದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ತಂದೆ

05:47 PM Jan 09, 2022 | Team Udayavani |

ಕುಷ್ಟಗಿ:  ಕುಡಿತ ಬಿಡುವಂತೆ ಮಕ್ಕಳ ಬುದ್ದಿವಾದಕ್ಕೆ ಬೇಸತ್ತು ವ್ಯಕ್ತಿಯೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಳಮಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಚಂದಪ್ಪ ಹೇಮಲಪ್ಪ ರಾಠೋಡ್ (60) ಮೃತ ವ್ಯಕ್ತಿ.

ದಿನವು ಕುಡಿಯುತ್ತಿದ್ದ ಚಂದಪ್ಪನಿಗೆ ಮಕ್ಕಳು ಮದ್ಯ ಸೇವಿಸದಂತೆ ಬುದ್ದಿವಾದ ಹೇಳಿದ್ದರು. ಇದರಿಂದ ನೊಂದ ಚಂದಪ್ಪ, ಕುಡಿದ ಮತ್ತಿನಲ್ಲಿ ಜಾನುವಾರುಗಳ ಉಣ್ಣೆ ನಾಶಕ್ಕೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಮೃತನಾಗಿದ್ದಾರೆ.

ತಾವರಗೇರಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next