ಕುಣಿಗಲ್: ಭಾರಿ ಮಳೆಯಿಂದ್ದಾಗಿ ಮಾರ್ಕೋನಹಳ್ಳಿ ಜಲಾಶಯ ಎರಡು ತಿಂಗಳಲ್ಲಿ ಎರಡನೇ ಭಾರಿ ಭರ್ತಿಯಾಗಿದ್ದು ಕಳೆದ ರಾತ್ರಿ ಸ್ವಯಂ ಚಾಲಿತ ಎರಡು ಸೈಪೋನ್ ಕೋಡಿ ನೀರು ನಾಗಮಂಗಲಕ್ಕೆ ಹೋಗುವ ರಸ್ತೆಯ ಸೇತುವೆ ಮೇಲೆ ನೀರು ಹರಿದು, ಕಾರು ತೇಲುಕೊಂಡು ಹೋಗಿ, ಮೂರು ಮಂದಿ ಪ್ರಾಣಾಪಯದಿಂದ ಪಾರಾದ ಘಟನೆ ನಡೆದಿದೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ್ದಾಗಿ ತುರುವೇಕೆರೆ, ಮಲ್ಲಾಘಟ್ಟಕೆರೆ, ವೀರವೈಷ್ಣವಿ ನಂದಿ ಸೇರಿದಂತೆ ಹಲವು ಕೆರೆಗಳು ತುಂಬಿ ಕೋಡಿ ಬಿದ್ದು ಮಾರ್ಕೋನಹಳ್ಳಿ ಜಲಾಶಯಕ್ಕೆ ಒಳ ಹರಿವು ಎರಡು ಸಾವಿರು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಇದರಿಂದ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿ ಸ್ವಯಂ ಚಾಲಿತ ಎರಡು ಸೈಪೋನ್‍ಗಳಲ್ಲಿ ನೀರು ರಬಸವಾಗಿ ಹೊರ ಹರಿಯುತ್ತಿದ್ದು ನಾಗಮಂಗಲಕ್ಕೆ ತೆರಳುವ ರಸ್ತೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಜನ ಸಂಚಾರಕ್ಕೆ ತೊಂದರೆಯಾಗಿದೆ,
ಪ್ರಾಣಾಪಯದಿಂದ ಪಾರು : ತಾಲೂಕಿನ ಸಂತೇಮಾವತ್ತೂರು ಗ್ರಾಮದ ಯೋಗೀಶ್, ಮನು ಸೇರಿದಂತೆ ಮತ್ತೋಬ್ಬರು ಯುವಕ ಬೆಂಗಳೂರಿನಿಂದ ಮಾರ್ಕೋನಹಳ್ಳಿ ಜಲಾಶಯದ ಸೇತುವೆ ಮಾರ್ಗವಾಗಿ ನಾಗಮಂಗಲ ತಾಲೂಕಿನ ಜಪ್ಪನಹಳ್ಳಿ ಗ್ರಾಮಕ್ಕೆ ಬುಧವಾರ ಮುಂಜಾನೆ 3-30 ರಲ್ಲಿ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದರು, ನೀರು ಸೇತುವೆ ಮೇಲೆ ಹರಿಯುವುದನ್ನು ತಿಳಿಯದ ಕಾರು ಚಾಲಕ ಕಾರನ್ನು ಚಾಲನೆ ಮಾಡಿದನ್ನು ಇದರಿಂದ ಕಾರು ನೀರಿನಲ್ಲಿ ಕೊಚ್ಚಿಕೊಂಡು ಬಹು ದೂರ ಹೋಯಿತ್ತು, ಪ್ರಯಾಣಿಸುತ್ತಿದ್ದ ಮೂರು ಮಂದಿ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡು ಕಂಗಾಲಾಗಿದ್ದರು, ಇದನ್ನು ಗಮನಿಸಿದ ಜಲಾಶಯದ ಗಾರ್ಡ್ ತಕ್ಷಣ ಕುಣಿಗಲ್ ಅಗ್ನಿಶಾಮಕ ದಳಕ್ಕೆ ಫೋನ್ ಕರೆ ಮಾಡಿದನ್ನು, ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೂರು ಮಂದಿಯಲ್ಲಿ ರಕ್ಷಿಸಿ ಸ್ಥಳೀಯರ ಸಹಕಾರದಿಂದ ಜೆಸಿಬಿ ಯಂತ್ರ ಬಳಸಿ ಕಾರನ್ನು ಮೇಲಕ್ಕೆ ಎತ್ತಿದ್ದಾರೆ,
ಮಾರ್ಗ ಬದಲಾವಣೆ : ಜಲಾಶಯದ ಸ್ವಯಂ ಚಾಲಿಯ ಸೈಪೋನ್‍ನಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದ್ದು, ನಾಗಮಂಗಳಕ್ಕೆ ಹೋಗುವ ರಸ್ತೆಯ ಸೇತುವೆ ಮೇಲೆ ಸುಮಾರು ಮೂರು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾದ ಕಾರಣ, ಹೇಮಾವತಿ ಇಲಾಖೆಯ ಅಧಿಕಾರಿಗಳು ಲಘು ವಾಹನಗಳ ಸಂಚಾರಕ್ಕೆ ಜಲಾಶಯದ ಏರಿ ಮೇಲೆ ಸಂಚರಿಸಲು ಅವಕಾಶ ಮಾಡಿಕೊಟ್ಟು ಭಾರಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ,
ಒಳ ಹರಿವು ಹೆಚ್ಚಳ ಸಾಧ್ಯತೆ : ದಿನವು ಮಳೆಯಾಗುತ್ತಿರುವ ಕಾರಣ ಮೇಲ್ಭಾಗದ ಎಲ್ಲಾ ಕೆರೆಗಳು ತುಂಬಿಕೊಂಡು ಮಾರ್ಕೋನಹಳ್ಳಿ ಜಲಾಶಯಕ್ಕೆ ಒಳ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರು ಹಾಗೂ ಅಮೃತೂರು ಹೋಬಳಿ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಎಡಿಯೂರು ಹೇಮಾವತಿ ಎಇಇ ಜಯರಾಮಯ್ಯ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ, ಜಲಾಶಯ ನೋಡಲು ಬರುವ ಪ್ರವಾಸಿಗರು ನೀರು ರಭಸವಾಗಿ ಹರಿಯುತ್ತಿರುವುದರಿಂದ ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.