ಕೊಣಾಜೆ: ಇಲ್ಲಿನ ಕುತ್ತಾರು ಸಮೀಪದ ಮದನಿನಗರದಲ್ಲಿರುವ ಆಸ್ಪತ್ರೆಯೊಂದರ ಬಳಿ ರಸ್ತೆ ಅಗಲೀಕರಣದ ವೇಳೆ ವಿದ್ಯುತ್ ತಂತಿಗೆ ಹಿಟಾಚಿ ವಾಹನ ತಗುಲಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಮಹಾದುರಂತವೊಂದು ತಪ್ಪಿದೆ.
ಸದಾ ವಾಹನಗಳ ಜಂಗುಳಿಯಿಂದ ತುಂಬಿರುವ ತೊಕ್ಕೊಟ್ಟು- ಮೆಲ್ಕಾರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ವೈರ್ ತಗುಲಿದ ತಕ್ಷಣವೇ ಚಾಲಕ ಹಿಟಾಚಿಯಿಂದ ಕೆಳಗೆ ಇಳಿದಿದ್ದರಿಂದ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾನೆ.
ಇದೇ ಸಮಯದಲ್ಲಿ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದು, ಅಲ್ಲಿಯೇ ಸಂಚರಿಸುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕೂಡಾ ಸೆಕೆಂಡುಗಳ ಅಂತರದಲ್ಲಿ ಪಾರಾಗಿದ್ದು, ಘಟನೆಯ ನಂತರ ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ಇದನ್ನೂ ಓದಿ:Inside Story: ಅಂದು ದಿಲ್ಲಿಯಲ್ಲಿ SI ಆಗಿದ್ದ ಟಿಕಾಯತ್ ರೈತ ನಾಯಕನಾಗಿ ಬೆಳೆದಿದ್ದು ಹೇಗೆ?
ವಿಷಯ ತಿಳಿದ ತಕ್ಷಣ ಮೆಸ್ಕಾಂ ಎಇಇ ದಯಾನಂದ್ ಸ್ಥಳಕ್ಕೆ ಭೇಟಿ ನೀಡಿದ್ದು, ಲೈನ್ ಮೆನ್ ಗಳು ತಮ್ಮ ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಆ ಬಳಿಕ ಮದನಿನಗರ ನಿವಾಸಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.