Advertisement

ಕಾಣಿಯೂರು : ಸರಕಳ್ಳತನಕ್ಕೆ ಬಂದವರ ಕಾರು ಪಲ್ಟಿ: ಗಾಯ  

08:55 PM Oct 20, 2022 | Team Udayavani |

ಕಾಣಿಯೂರು : ಕಂಬಳಿ ,ಮಾರುವ ನೆಪ್ಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದು ಮನೆಯೊಡತಿಯ ಸರಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಲು ಯತ್ನಿಸಿದಾಗ  ಕಾರು ಪಲ್ಟಿಯಾಗಿ ಕಳ್ಳರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರು ಬಳಿ ಗುರುವಾರ ನಡೆದಿದೆ.

Advertisement

ಗಾಯಗೊಂಡ ಕಳ್ಳರನ್ನು ಮಂಗಳೂರು ಪೊಳಲಿ ಅಟ್ಟೂರು ನಿವಾಸಿಗಳಾದ ರಮೀಶುದ್ಧೀನ…(25) ಹಾಗೂ ರಫೀಕ್‌ (30) ಎಂದು ಗುರುತಿಸಲಾಗಿದೆ.

ಇವರು ಕಂಬಳಿ ಮಾರುವ ನೆಪದಲ್ಲಿ ಕಾರೊಂದರಲ್ಲಿ ದೋಳ್ಪಾಡಿ ಗ್ರಾಮದ ಕಟ್ಟ ನಿವಾಸಿ ಕಿಟ್ಟ ಎಂಬವರ ಮನೆಗೆ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯಲ್ಲಿ ಮನೆಯ ಒಡತಿ ಮಾತ್ರ ಇರುವುದನ್ನು ಗಮನಸಿ ಕಂಬಳಿಯನ್ನು ಖರೀದಿಸುವಂತೆ ,ಒತ್ತಾಯಿಸಿದ್ದಾರೆ. ಕಂಬಳಿ ಬೆಡ್‌ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಕಳ್ಳರು ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಂಡ ಮಹಿಳೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಆಗಮಿಸಿದಾಗ ಕಳ್ಳರು ಕಾರು ಏರಿ ಕಾಳ್ಕಿತ್ತಿದ್ದಾರೆ.

ಇತ್ತ ದೋಳ್ಪಾಡಿಯಿಂದ ಪುಣ್ಚತ್ತಾರು ಕಡೆ ಸಾಗುವಾದ ಸಾರ್ವಜನಿಕರು ಅಡ್ಡಗಟ್ಟಿದ್ದಾರೆ . ಇಲ್ಲಿಂದ ಯೂಟರ್ನ್ ಹೊಡೆದ ಕಳ್ಳರು ನೇವಾಗಿ ಕಾಣಿಯೂರು ಕೂಡು ರಸ್ತೆಗೆ  ದಾರಿಯಲ್ಲಿ ಸಾಗಿದ್ದಾರೆ.  ಅಲ್ಲಿ ಕೂಡಾ ಸಾರ್ವಜನಿಕರು ಸೇರಿದ್ದನ್ನು ಗಮನಿಸಿ  ರ್ರಾಬರ್ರಿ ಕಾರು ಚಲಾಸಿಕೊಂಡು ಹೋಗಿ ಸಾರ್ವಜನಿಕರು ಬೆನ್ನಟ್ಟತ್ತಿದ್ದಂತೆ  ಕೂಡು ರಸ್ತೆಯಲ್ಲಿ  ಕಾರು ಪಲ್ಟಿಯಾಗಿದೆ. ಪರಿಣಾಮ ಕಳ್ಳರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಘಟನೆಯಿಂದಾಗಿ ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ.

ವಾರದ ಹಿಂದೆ ಕೂಡಾ ಒಂದು ಟೀಮ್‌ ಕಂಬಳಿ ಮಾರು ನೆಪದಲ್ಲಿ ದೋಳ್ಪಾಡಿಗೆ ಬಂದಿದ್ದರು. ಅವರು ಕೂಡಾ ಸಂಶಯಾಸ್ಪದವಾಗಿ ಕಾಣುತ್ತಿದ್ದರು. ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು. ಯಾರೇ ಹೊರಗಿನವರು ಅಪರಿಚಿತರು ಊರಲ್ಲಿ ವ್ಯಾಪಾರ ಮಾಡಬೇಕಾದರೆ ಪಂಚಾಯಿತಿಯ ಅನುಮತಿ ಪಡೆದೇ ಕಾಲಿಡಬೇಕು, ಅನುಮತಿ ಇಲ್ಲದವರು ವ್ಯಾಪಾರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next