Advertisement

ಖಾಸಗಿ ವಿಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲ್ಯಾಕ್‌ಮೇಲ್‌

06:26 PM Mar 26, 2021 | Team Udayavani |

ಹುಬ್ಬಳ್ಳಿ: ಆಟೋ ಚಾಲಕನೊಬ್ಬ ಯುವತಿಗೆ ಜೀವ ಬೆದರಿಕೆ ಒಡ್ಡಿ ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸರಕಾರಿ ಕಚೇರಿಯೊಂದರಲ್ಲಿ ಯುವತಿಯ ತಾಯಿ ಕೆಲಸ ಮಾಡುತ್ತಿದ್ದಾರೆ. ಆಗಾಗ ಕಚೇರಿಗೆ ಆರೋಪಿತನ ಆಟೋದಲ್ಲಿ ಸಂಚಾರಮಾಡುತ್ತಿದ್ದರು. ಇದೇ ಸಲುಗೆಯಿಂದ ಆಟೋರಿಕ್ಷಾ ಚಾಲಕ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2021 ಜನೇವರಿ ತಿಂಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆಟೋರಿಕ್ಷಾ ಚಾಲಕ ಯುವತಿಯ ಮನೆಗೆ ಆಗಮಿಸಿ ನಿಮ್ಮ ತಾಯಿ ಅಕ್ಕಿ ಚೀಲ ಕಳುಹಿಸಿದ್ದಾರೆ ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಬಾಗಿಲು ತೆಗೆದಾಗ ಒಳ ಪ್ರವೇಶಿಸಿದ ಆಟೋ ಚಾಲಕ ಕುಡಿಯಲು ನೀರು ಕೇಳಿದ್ದಾನೆ. ತರಲು ಒಳ ಹೋದಾಗ ಹಿಂಬಾಲಿಸಿ ಚಾಕು ಹಿಡಿದು ತಾನು ಹೇಳಿದಂತೆ ಕೇಳಬೇಕೆಂದು ಬೆದರಿಕೆ ಹಾಕಿದ್ದಾನೆ.

ಮೈಮೇಲಿನ ಬಟ್ಟೆಗಳನ್ನು ತೆಗೆಯಲು ಒಪ್ಪದಿದ್ದಾಗ ದೈಹಿಕ ಹಲ್ಲೆ ಮಾಡಿದ್ದಾನೆ. ಇದರಿಂದ ಯುವತಿ ಪ್ರಾಣಕ್ಕೆ ಹೆದರಿ ಬಟ್ಟೆ ಬಿಚ್ಚುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ವಿಡಿಯೋ ಶೇರ್‌ ಮಾಡಬಾರದು ಎನ್ನುವುದಾದರೆ 25 ಲಕ್ಷ ರೂ. ಕೊಡಬೇಕು ಎಂದು ಬೆದರಿಕೆ ಹಾಕಿದ್ದಾನೆ. ಆದರೆ ಬೆದರಿಕೆ ಒಪ್ಪದಿದ್ದಾಗ ಆ ವಿಡಿಯೋವನ್ನು ಯುವತಿಯ ಮೊಬೈಲ್‌ಗೆ ಕಳುಹಿಸಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ 40 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಯುವತಿ ಹಾಗೂ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ

4 ಲಕ್ಷ ರೂ. ವಂಚನೆ;

Advertisement

ಹುಬ್ಬಳ್ಳಿ: ವಾಟ್ಸ್‌ಆ್ಯಪ್‌ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರಿಗೆ ಆರೋಗ್ಯ ಸರಿಯಿಲ್ಲ ಎಂದು ವ್ಯಕ್ತಿಯೊಬ್ಬರಿಂದ ಹಣ ವರ್ಗಾವಣೆಮಾಡಿಕೊಂಡು ವಂಚನೆ ಮಾಡಿರುವ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಚಂದ್ರಶೇಖರ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಮೂಲಕಪಿ.ಎಸ್‌. ರವಿಚಂದ್ರನ್‌ (65) ಅವರೊಂದಿಗೆಪರಿಚಯ ಮಾಡಿಕೊಂಡಿದ್ದಾನೆ. ತಾನು ಫ್ರಾನ್ಸಿಸ್ಕೋದಲ್ಲಿ ಇದ್ದು, ತಮ್ಮ ಸಂಬಂ  ಧಿಯೊಬ್ಬರಿಗೆ ಆರೋಗ್ಯ ಸರಿಯಿಲ್ಲ.ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಹಣದ ಬೇಕಾಗಿದೆ ಎಂದು ಬೇಡಿಕೆಯಿಟ್ಟಿದ್ದಾನೆ.

ಎರಡ್ಮೂರು ದಿನದಲ್ಲಿ ಮರಳಿಸುವುದಾಗಿ ಮೂರು ಬ್ಯಾಂಕ್‌ ಖಾತೆಗಳಿಂದ ಸುಮಾರು4 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ ಎಂದು ಪಿ.ಎಸ್‌. ರವಿಚಂದ್ರನ್‌ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next