Advertisement

ಜಾತ್ರೆ ನಡೆಸಲು ಹೋಗಿ ಜೈಲು ಸೇರಿದರು!

01:19 PM Apr 27, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿಯಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂ ಸಿದ ಆಪಾದನೆ ಮೇರೆಗೆ 26ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಹೊಂಗಹಳ್ಳಿ ಗ್ರಾಮದ ಎಚ್‌.ಎಂ.ಮಹೇಶ್‌, ಮಂಜಪ್ಪ,ಮಂಜಪ್ಪ, ಶಿವಕುಮಾರ್‌, ಕುಬೇರಪ್ಪ, ಶಿವಪ್ಪ, ಮಲ್ಲಪ್ಪ,ಲೋಕೇಶ, ಸ್ವಾಮಿ, ಪ್ರಮೋದ, ಎಚ್‌.ಆರ್‌.ರೇವಣ್ಣ,ಮಣಿಕಂಠ, ಶ್ರೀಧರ, ಬಸವಣ್ಣ ಬಂಧಿತ ಆರೋಪಿಗಳ.ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಸಂತೆ, ಜಾತ್ರೆಹೆಚ್ಚು ಜನ ಸೇರುವ ಇತರೆ ಯಾವುದೇ ಧಾರ್ಮಿಕಸಮಾರಂಭ ನಡೆಸದಂತೆ ಸಾಂಕ್ರಾಮಿಕ ರೋಗ ನಿಯಂತ್ರಣಕಾಯ್ದೆ ಮತ್ತು ಸೆಕ್ಷನ್‌ 143, 353, 188 ಮತ್ತು 149 ಗಳನ್ನುಜಾರಿ ಮಾಡಲಾಗಿದೆ. ಈ ರೀತಿ ಇದ್ದರೂ ಗ್ರಾಮದ ಕೋಡಿಬಸವೇಶ್ವರ ರಥೋತ್ಸವವನ್ನು ಸರಳವಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಿದ್ದರು.

ಜನ ಸೇರುವ ಕಾರಣ ಯಾವುದೇ ಆಚರಣೆಗಳು ಬೇಡ ಎಂದು ಪೊಲೀಸರು ತಿಳಿಸಿದ್ದರು. ಆದರೂ ರಥೋತ್ಸವ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಪಿಐಮಹದೇವಸ್ವಾಮಿ, ಪಿಎಸ್‌ಐ ಜೆ.ರಾಜೇಂದ್ರ ಮತ್ತು ಸಿಬ್ಬಂದಿ ಗ್ರಾಮಕ್ಕೆ ತೆರಳಿ 14 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ನ್ಯಾಯಾಧೀಶರ ಮುಂದೆಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 26 ಇತರೆ ಮಂದಿ ವಿರುದ್ಧಪ್ರಕರಣ ದಾಖಲಾಗಿದ್ದು, ಇವರ ಬಂಧನಕ್ಕೆಬಲೆ ಬೀಸಲಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next