Advertisement

ರಾತ್ರಿ ಆದರೂ ಧ್ವಜ ಕೆಳಗಿಳಿಸದ ಅಧಿಕಾರಿಗಳು

04:20 PM Jan 27, 2023 | Team Udayavani |

ಗುಬ್ಬಿ: ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿ ರುವ ಘಟನೆ ನಡೆದಿದೆ.

Advertisement

ಗಣ ರಾಜ್ಯೊಧೀತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಪಪಂ ಕಚೇರಿ ಮುಂಭಾಗ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು. ನಿಯಮಾನುಸಾರ ರಾಷ್ಟ್ರಧ್ವಜವನ್ನು ಸೂರ್ಯ ಸ್ತಕ್ಕೆ ಮುಂಚೆ ಗೌರವಯುತವಾಗಿ ಕೆಳಗೆ ಇಳಿಸಬೇಕಾಗಿದ್ದ ಪಪಂ ಮುಖ್ಯಾಧಿ ಕಾರಿಗಳು, ರಾತ್ರಿ 7.30 ಗಂಟೆ ಆದರೂ ರಾಷ್ಟ್ರಧ್ವಜವನ್ನು ಕೆಳಗಿಳಿಸದೇ ಅಪಮಾನ ಎಸಗಿರುವ ಘಟನೆ ನಡೆದಿದೆ.

ವಿಷಯ ತಿಳಿದ ನಂತರ ಕಚೇರಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆತುರಾತುರವಾಗಿ ರಾಷ್ಟ್ರಧ್ವಜ ಕೆಳಗಿಳಿಸಿ ನಾಪತ್ತೆಯಾಗಿದ್ದಾರೆ.

ಕಾನೂನು ಕ್ರಮಕ್ಕೆ ಒತ್ತಾಯ: ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್‌.ಅಣ್ಣಪ್ಪ ಸ್ವಾಮಿ, ಅಧಿಕಾರಿಗಳು ರಾಷ್ಟ್ರಧ್ವಜವನ್ನು  ನಿಯಮಾನುಸಾ ರವಾಗಿ ಗೌರವ ಸೂಚಿಸಿ ಸೂರ್ಯಸ್ತಕ್ಕೆ ಮುಂಚೆ ಕೆಳಗೆ ಇಳಿಸದೇ ಕರ್ತವ್ಯ ಲೋಪ ಎಸಗಿದ್ದು, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೂರು ದಾಖಲಿಸಿ: ರಾಷ್ಟ್ರಧ್ವಜವನ್ನು ಸೂರ್ಯಾಸ್ತಕ್ಕೆ ಮುಂಚೆ ಇಳಿಸದಿರುವುದು ನನ್ನ ಗಮನಕ್ಕೆ ಬಂದಿದ್ದು, ಕಾನೂನು ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಿಸಿದವರ ಮೇಲೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಬಿ. ಆರತಿ ಉದಯವಾಣಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next