Advertisement

ಗೋವಾ : ಒಂದು ತಿಂಗಳ ಮಗುವನ್ನು ಅಪರಿಹರಿಸಿದ ಅಪರಿಚಿತ ಮಹಿಳೆ

05:05 PM Jun 12, 2021 | Team Udayavani |

ಪಣಜಿ: ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ಮಹಿಳೆಯೋರ್ವಳ ಒಂದು ತಿಂಗಳ ಮಗುವನ್ನು ಅಪರಿಚಿತರು ಅಪಹರಿಸಿದ ಘಟನೆ ನಡೆದಿದೆ.

Advertisement

ಮಗುವನ್ನು ಅಪರಿಸಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು ಆಗಶಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಓರಿಸ್ಸಾ ಮೂಲದ ಮಹಿಳೆಯೋರ್ವಳು ಒಂದು ತಿಂಗಳ ಮಗುವನ್ನು ಗೋವಾ ಮೆಡಿಕಲ್ ಕಾಲೇಜಿಗೆ ಕರೆತಂದು ಪೋಲಿಯೊ ಡೋಸ್ ಹಾಕಿಸಲು ಬಂದಿದ್ದಳು. ಆಗ ಅಪರಿಚಿತ ಮಹಿಳೆಯೋರ್ವಳು ಈಕೆಯ ಗೆಳೆತನ ಬೆಳೆಸಿದರು. ತಿನ್ನಲು ಏನಾದರೂ ತರುತ್ತೇನೆ ನನ್ನ ಮಗುವನ್ನು ನೋಡಿಕೊ ಎಂದು ತಾಯಿಯು ಮಗುವನ್ನು ಅಪರಿಚಿತಳ ಕೈಗೆ ಕೊಟ್ಟು ಎದುರಲ್ಲೇ ಇದ್ದ ಅಂಗಡಿಗೆ ತೆರಳಿದಾಗ ಮಗುವನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಆಗಶಿ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಗುವನ್ನು ಅಪಹರಿಸಿರುವುದು ಆತಂಕಕಾರಿ ಸಂಗತಿ ಎಂದು ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯಿಂದಾಗಿ ರಾಜ್ಯದಲ್ಲಿ ಆಸ್ಪತ್ರೆಗಳು ಸುರಕ್ಷಿತವಾಗಿಲ್ಲ ಎಂಬುದು ಖಚಿತವಾಗಿದೆ. ಮಗುವನ್ನು ಅಪಹರಿಸಿದವರನ್ನು ಪೋಲಿಸರು ಕೂಡಲೇ ಬಂಧಿಸಬೇಕು ಎಂದು ದಿಗಂಬರ್ ಕಾಮತ್ ಆಘ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next