ಪಣಜಿ: ಮಹದಾಯಿ ನದಿಗೆ ಸ್ನಾನಕ್ಕೆಂದು ಇಳಿದಿದ್ದ ಬಾಲಕನೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗೋವಾದ ವಾಳಪೈ ಭಾಗದಲ್ಲಿ ನಡೆದಿದೆ.
ಇರ್ಫಾನ್ ಶೇಖ್ (16) ಮೃತ ಬಾಲಕ.
ನದಿಯಲ್ಲಿ ಮುಳುಗಿದ್ದ ಇನ್ನು ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಮೂಲದವರಾದ ಇರಫಾನ್ ಶೇಖ್, ಆಸಿಫ್ ಶೇಖ್, ರಿಹಾನ್ ಶೇಖ್ ಈ ಮೂವರು ಸ್ನಾನಕ್ಕೆಂದು ಮಹದಾಯಿ ನದಿಗೆ ಇಳಿದಿದ್ದರು. ಈಜುತ್ತ ಈಜುತ್ತ ಇವರು ನದಿಯ ಮಧ್ಯಭಾಗಕ್ಕೆ ತಲುಪಿದ್ದರು. ನದಿಯಲ್ಲಿ ಮೂವರು ತೇಲಿಹೋಗುತ್ತಿದ್ದರು, ಆಗ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇರ್ಫಾನ್ ಶೇಖ್ ನೀರಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾನೆ.
ರಕ್ಷಿಸಲಾದ ರಿಹಾನ್ ಶೇಖ್ ನ ಸ್ಥಿತಿ ಚಿಂತಾಜನಕವಾಗಿದ್ದು ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.