Advertisement

ಉಸಿರಾಟದ ತೊಂದರೆಯಿಂದ ವ್ಯಕ್ತಿ ಸಾವು :ವೈದ್ಯರನ್ನು ನೂಕಾಡಿದ ಸಂಬಂಧಿಕರು

03:20 PM May 15, 2021 | Team Udayavani |

ಗಂಗಾವತಿ: ಉಸಿರಾಟದ ತೊಂದರೆಯಿಂದ ವ್ಯಕ್ತಿಯೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಮೃತ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ವೈದ್ಯರ ಜತೆ ವಾಗ್ವಾದಕ್ಕಿಳಿದು ನೂಕಾಟ ಮಾಡಿದ ಘಟನೆ ತಾಲೂಕಿನ ಆನೆಗೊಂದಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಶನಿವಾರ  ಜರುಗಿದೆ.

Advertisement

ಹನುಮಂತಪ್ಪ ನಾಯಕ(50) ಎಂಬ‌ ವ್ಯಕ್ತಿ ಕಳೆದ ಹಲವು ದಿನಗಳಿಗೊಮ್ಮೆ ಅನಾರೋಗ್ಯ ಹಿನ್ನೆಲೆಯಲ್ಲಿ ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರ ಮನೆಗೆ ಮರಳಿದ್ದ ಉಸಿರಾಟದ ತೊಂದರೆಯಿಂದ ಸ್ಥಳೀಯ ಸರಕಾರಿ ಆಸ್ಪತ್ರೆಗೆ ತೆರಳಿದ್ದಾನೆ. ಆಕ್ಸಿಜನ್ ಕೊರತೆಯಿದ್ದು ಗಂಗಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರಿಂದ ಗಂಗಾವತಿ ಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ : ತೌಕ್ತೆ ಚಂಡ ಮಾರುತ ಪ್ರಭಾವ: ಕಾಪು ಲೈಟ್ ಹೌಸ್ ಸುತ್ತಮುತ್ತಲಿನಲ್ಲಿ ಆತಂಕ

ಇದರಿಂದ ಆಕ್ರೋಶಗೊಂಡ ಮೃತ ಹನುಮಂತಪ್ಪ ನಾಯಕ ಸಂಬಂಧಿಕರು ಆಸ್ಪತ್ರೆಗೆ ತೆರಳಿ ನಿರ್ಲಕ್ಷ್ಯ ವಹಿಸಿದ ವೈದ್ಯ ಸಿಬ್ಬಂದಿ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೈದ್ಯರ ಜನರ ಮಧ್ಯೆ ವಾಗ್ವಾದ ನೂಕಾಟ ಜರುಗಿತು.

ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ಗ್ರಾಮೀಣ ಪಿಎಸ್ಐ ಜೆ.ದೊಡ್ಡಪ್ಪ ಭೇಟಿ ನೀಡಿ ಜನರನ್ನು ಶಾಂತಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಕೊರೊನಾ ಸಂದರ್ಭದಲ್ಲಿ ವೈದ್ಯರು‌ ಹಾಗೂ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮೃತ ಹನುಮಂತಪ್ಪ ನಾಯಕ ತೀವ್ರ ಉಸಿರಾಟದ ತೊಂದರೆಯಿಂದ ಮೃತ ಪಟ್ಟಿದ್ದಾರೆ. ವೈದ್ಯಕೀಯ ಸೌಲಭ್ಯ ಕೊರತೆಯ ಕಾರಣ ಗಂಗಾವತಿ ಗೆ ಕಳುಹಿಸಿದ್ದು ಮಾರ್ಗಮಧ್ಯೆ ಮೃತರಾಗಿದ್ದಾರೆ. ಆದ್ದರಿಂದ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿಲ್ಲ ಜನರು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವುದು ಸರಿಯಲ್ಲ. ಆನೆಗೊಂದಿಯಲ್ಲಿ ಶೀಘ್ರವಾಗಿ ಸಭೆ ನಡೆಸಿ ಆಸ್ಪತ್ರೆಗೆ ವೈದ್ಯರು ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ ಎಂದು ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next