Advertisement

ಮಿಶ್ರ ಕಸ ಸುರಿಯುವ ಮಿಟ್ಟಗಾನಹಳ್ಳಿ ‌ಭೂಭರ್ತಿಯಲ್ಲಿ ಆಕಸ್ಮಿಕ ಬೆಂಕಿ

09:02 PM Mar 21, 2021 | Team Udayavani |

ಬೆಂಗಳೂರು: ನಗರದ ಮಿಶ್ರ ಕಸ ಸುರಿಯುವ ಮಿಟ್ಟಗಾನಹಳ್ಳಿ ‌ಭೂಭರ್ತಿಯಲ್ಲಿ ಭಾನುವಾರ ಸಂಜೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ನಗರದಲ್ಲಿ ಕಸ ವಿಲೇವಾರಿ‌ ವ್ಯತ್ಯಾಸವಾಗುವ ಸಾಧ್ಯತೆ‌ ಇದೆ. ನಗರದಲ್ಲಿ ಹಸಿಕಸ ಸಂಸ್ಕರಣಾ ಘಟಕಗಳಿಗೆ ಸಾಗಾಣಿಕೆ ಆಗುವ ಹಸಿಕಸ ಹೊರತುಪಡಿಸಿ,  ಮಿಶ್ರಕಸ ಸುರಿಯಲು‌ ಇರುವ ಏಕೈಕ ಭೂಭರ್ತಿ (ಕ್ವಾರಿ) ಇದಾಗಿದೆ. ಭಾನುವಾರ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲಿನ ಒಣಗಿದ ಗಿಡ ಗಂಟಿಗಳು ಮಾತ್ರ ಬೆಂಕಿಗಾಹುತಿಯಾಗಿವೆ.

Advertisement

ಸಂಜೆ ನಾಲ್ಕು ಗಂಟೆ ವೇಳೆಗೆ ಭೂಭರ್ತಿ ಕ್ವಾರಿಯ ಬಳಿ ಒಣಗಿದ ಗಿಡಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ಹೆಚ್ಚಾಗಿದ್ದ ಕಾರಣ ಬೆಂಕಿ ಹೆಚ್ಚಾಗಿ ಆವರಸಿದ್ದು, ಅದನ್ನು ತಕ್ಷಣ ನಂದಿಸಲಾಗಿದೆ. ಆದರೆ, ಭೂಭರ್ತಿ ಮಾಡಲಾದ ತ್ಯಾಜ್ಯಕ್ಕೆ ಬೆಂಕಿ ಕಾಣಿಸಿಕೊಂಡಿಲ್ಲ. ಇನ್ನು ಭೂ ಭರ್ತಿ ಮಾಡಲಾದ ತ್ಯಾಜ್ಯವನ್ನು ಬೆಳ್ಳೂರು ಕ್ವಾರಿಯಂತೆ ತೆರೆದಿಡದೇ, ತ್ಯಾಜ್ಯದ ಮೇಲೆ 2 ಅಡಿ ಎತ್ತರದಷ್ಟು ಮಣ್ಣು ಮುಚ್ಚಲಾಗುತ್ತದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಪಾಲಿಕೆ ಘನ ತ್ಯಾಜ್ಯ ವಿಭಾಗದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ ಹೆಚ್ಚಳ ಹಿನ್ನೆಲೆ: ಹೋಳಿ ಆಚರಣೆಗೆ ನಿರ್ಬಂಧ ಹೇರಿದ ಒಡಿಶಾ ಸರ್ಕಾರ

ನಗರದಲ್ಲಿ ಶನಿವಾರ ಉತ್ಪತ್ತಿಯಾದ ಮಿಶ್ರಕಸವನ್ನು ಬಹುತೇಕ ಭಾನುವಾರ ವಿಲೇವಾರಿ ಮಾಡಲಾಗಿದೆ. ಸೋಮವಾರದ ಬೆಳಗ್ಗೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದೆ ಇದ್ದಲ್ಲಿ, ನಗರದಲ್ಲಿ ಭಾನುವಾರ ಉತ್ಪತ್ತಿ ಆಗುವ ಮಿಶ್ರಕಸ ವಿಲೇವಾರಿ ತೊಡಕಾಗಲಿದ್ದು, ನಗರದಲ್ಲಿ ಕಸ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next