ಬೆಂಗಳೂರು: ಪಶ್ಚಿಮ ಮತ್ತು ಪೂರ್ವ ವಿಭಾಗ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನೆರೆ ರಾಜ್ಯಗಳಿಂದ ಗಾಂಜಾ ತಂದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ತ್ರಿಪುರದಿಂದ ಗಾಂಜಾ ತಂದು ನಗರದಲ್ಲಿ ಸಣ್ಣ ಪೊಟ್ಟಣಗಳಲ್ಲಿ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಮಾರಾಟಗಾರರನ್ನುಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ತ್ರಿಪುರದ ಖಮರುಲ್ಲ ಇಸ್ಲಾಂ(27), ಸಾಹಿದ್‌ಮಿಯಾ(40) ಮತ್ತು ಖುರ್ಷಿದ್ ಮಿಯಾ(21)ಬಂಧಿತರು. ಆರೋಪಿಗಳಿಂದ ಆರು ಲಕ್ಷ ರೂ. ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ನಿಲ್ದಾಣ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂಲತಃ ತ್ರಿಪುರದ ಮೂವರು ಆರೋಪಿಗಳು ತಮ್ಮ ರಾಜ್ಯದ ಮಧುಪುರ ಹಾಗೂ ಇತರೆಡೆ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ನಂತರ ಅವುಗಳನ್ನು ರೈಲುಗಳ ಮೂಲಕ ಬೆಂಗಳೂರಿಗೆ ತಂದು, ಸ್ಥಳೀಯ ಪೆಡ್ಲರ್‌ಗಳಿಗೆ ಕೆಜಿಗಟ್ಟಲೇ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
15 ಕೆ.ಜಿ. ಗಾಂಜಾ ವಶ: ರಾಮಮೂರ್ತಿನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನುಬಂಧಿಸಿದ್ದು, ಅವರಿಂದ ನಾಲ್ಕು ಲಕ್ಷ ರೂ. ಮೌಲ್ಯದ15 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಬೇಗೂರಿನ ಉಲ್ಲಹಳ್ಳಿ ಗೇಟ್ ನಿವಾಸಿ ಆಸೀಫ್ ಶೇಖ್(30) ಮತ್ತು ಶಿವರಾಜ್ (26) ಬಂಧಿತರು. ಆರೋಪಿಗಳು ಒಡಿಶಾದಿಂದ ಪ್ರತಿ ಕೆ.ಜಿ ಗಾಂಜಾಗೆ ಹತ್ತು ಸಾವಿರ ರೂ.ಕೊಟ್ಟು ಖರೀದಿಸುತ್ತಿದ್ದರು. ನಂತರ ಅದನ್ನು ನಗರದಲ್ಲಿ ಪ್ರತಿ ಕೆ.ಜಿಗೆ 25 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ, ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಸಣ್ಣ-ಸಣ್ಣ ಪೊಟ್ಟಣಗಳಲ್ಲಿ ಹಾಕಿ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.