ಬೆಂಗಳೂರು: ಪೊಲೀಸರ ಸೋಗಿನಲ್ಲಿ ಸಿವಿಲ್ ಎಂಜಿನಿಯರ್ ಮನೆಗೆ ನುಗ್ಗಿದ ದರೋಡೆಕೋರರು 19 ಲಕ್ಷ ರೂ. ನಗದು ಮತ್ತು 500 ಗ್ರಾಂ ಚಿನ್ನಾಭರಣ ದೋಚಿದಲ್ಲದೆ, ಇಬ್ಬರು ಕುಟುಂಬ ಸದಸ್ಯರನ್ನು ಕರೆದೊಯ್ದು ಮಾರ್ಗ ಮಧ್ಯೆ ಬಿಟ್ಟು ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜನಿಯರ್ ಆಗಿದ್ದ ಸಾಮ್ಯಾ ನಾಯ್ಕ ಎಂಬುವರ ದೂರಿನ ಮೇರೆಗೆನಾಲ್ಕೈದು ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮಹಾಲಕ್ಷ್ಮೀ ಲೇಔಟ್‌ನ 2ನೇ ಹಂತದಲ್ಲಿರುವ ಸಾಮ್ಯಾನಾಯ್ಕ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿದ್ದು, ಈ ಮೊದಲು ಭಾರತ್ ಬಿಲ್ಡರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದಾರೆ. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಸುಮಾರಿಗೆ ನಾಲ್ಕೈದು ಮಂದಿ ಅಪರಿಚಿತರು ಮನೆಗೆ ಬಂದಿದ್ದು, ತಾವು ತಿಪಟೂರು ಠಾಣೆಯ ಕ್ರೈಂ ವಿಭಾಗದ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ.
ಬಳಿಕ, ವ್ಯಕ್ತಿಯೊಬ್ಬನನ್ನು ತೋರಿಸಿ ಈತ ನನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಕಳವು ಮಾಡಿರುವ ಹಣ, ಚಿನ್ನಾಭರಣಗಳನ್ನು ತಮಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಈತ ಕೊಟ್ಟಿರುವ ಹಣ, ಒಡವೆ ಗಳು ಹಾಗೂ ಪಿಸ್ತೂಲ್ ಕೊಡಿ,ಇಲ್ಲವಾದರೆ “ನಿಮ್ಮನ್ನು ಬಂಧಿಸಲಾಗು ವುದು’ ಎಂದು ರಿವಾ ಲ್ವಾರ್ ತೋರಿಸ ಬೆದರಿಸಿದ್ದಾರೆ. ನಂತರ ಕುಟುಂಬದ ಸದಸ್ಯರ ಬಳಿ ಇದ್ದ ಮೊಬೈಲ್‌ಗಳನ್ನು ಕಸಿದು ಕೊಂಡಿದ್ದಾರೆ. ಅಲ್ಲದೆ, ಬಳಿಕ ಸಾಮ್ಯಾ ನಾಯ್ಕ ಅವರ ಪುತ್ರ ಮನೋಹರ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾರೆ.
ಸುಮಾರು 2 ಗಂಟೆ ಕಾಲ ಮನೆಯ ಎಲ್ಲೆಡೆ ಹುಡುಕಾಟ ನಡೆಸಿ ರೂಮ್‌ನಸೂಟ್‌ಕೇಸ್‌ನಲ್ಲಿ ಇಟ್ಟಿದ್ದ 19 ಲಕ್ಷ ರೂ. ನಗದು ಹಾಗೂ ಬೀರುವಿನಲ್ಲಿದ್ದ ಸುಮಾರು 25 ಲಕ್ಷ ರೂ.ಮೌಲ್ಯದ 500ಗ್ರಾಂ ಚಿನ್ನಾಭರಣ ತೆಗೆದುಕೊಂಡಿದ್ದಾರೆ. ನಂತರ ಠಾಣೆಗೆ ಬನ್ನಿ ಎಂದು ಅಪ್ಪ ಮತ್ತುಮಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಗೊರಗುಂಟೆ ಪಾಳ್ಯ, ಬಿಇಎಲ್‌ವೃತ್ತ ಮಾರ್ಗವಾಗಿ ಎಂ.ಎಸ್.ಪಾಳ್ಯದಕಡೆ ಹೋಗಿ, ಹಲವು ಕಡೆ ಸುತ್ತಾಡಿಸಿ ಶನಿವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಜಾಲಹಳ್ಳಿ ಸಮೀಪದಲ್ಲಿ ಕಾರಿನಿಂದ ಇಳಿಸಿ,ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ನಾವು ಕರೆದಾಗ ಠಾಣೆಗೆ ಬರಬೇಕು ಎಂದು ಎಚ್ಚರಿಕೆ ನೀಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನೆ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.