Advertisement

ಕ್ಯಾಬ್‌ನಲ್ಲೇ ಚಾಲಕನಿಂದ ಅತ್ಯಾಚಾರ

11:08 PM Sep 22, 2021 | Team Udayavani |

ಬೆಂಗಳೂರು:  ಬೆಂಗಳೂರಿನ ಜೀವನ್‌ ಭೀಮಾನಗರದಲ್ಲಿ ಕ್ಯಾಬ್‌ಚಾಲಕನೊಬ್ಬ ಬುಧವಾರ ನಸುಕಿನ ಜಾವ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.

Advertisement

ಘಟನೆ ಸಂಬಂಧ ಆಂಧ್ರಪ್ರದೇಶದ ಚಿತ್ತೂರು ಮೂಲದ ಕ್ಯಾಬ್‌ ಚಾಲಕ ದೇವರಾಜಲು(30) ಎಂಬಾತನನ್ನು ಬಂಧಿಸಲಾಗಿದೆ. ಜೀವನ್‌ ಭೀಮಾನಗರ ಪೊಲೀಸರು   ತನಿಖೆ ಮುಂದುವರಿಸಿದ್ದಾರೆ.

ಹೊಟೇಲ್‌ನಲ್ಲಿ ಮ್ಯಾನೇಜರ್‌ ಆಗಿರುವ ಸಂತ್ರಸ್ತೆ ಮಂಗಳವಾರ ರಾತ್ರಿ ಸ್ನೇಹಿತರೊಬ್ಬರ ಮನೆಯಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಬಳಿಕ ನಸುಕಿನ 3.30ರ ಸುಮಾರಿಗೆ ಎಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್‌ಪಾಳ್ಯದಲ್ಲಿರುವ ಮನೆಗೆ ಹೋಗಲು ಕ್ಯಾಬ್‌ ಬುಕ್‌ ಮಾಡಿದ್ದರು. ಸ್ಥಳಕ್ಕೆ ಬಂದ ಆರೋಪಿ, ಸಂತ್ರಸ್ತೆಯನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದು, ಸ್ವಲ್ಪ ದೂರ ಹೋಗುತ್ತಿದ್ದಂತೆ ನಿದ್ದೆ ಮಂಪರಿನಲ್ಲಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು, ಕ್ಯಾಬ್‌ ಚಾಲಕನನ್ನು ಬಂಧಿಸಲಾಗಿದೆ. ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ.ಎಸ್‌. ಶರಣಪ್ಪ, ಪೂರ್ವ ವಿಭಾಗ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next