Advertisement

ವೃದ್ಧಾಶ್ರಮದಲ್ಲಿ ಮಹಿಳೆಯ ಕೊಲೆ !

11:02 PM Aug 16, 2021 | Team Udayavani |

ಬೆಂಗಳೂರು:  ಊಟಕ್ಕಾಗಿ ಕೂಗಾಡುತ್ತಿದ್ದ ವೃದ್ಧೆಯನ್ನು ಮತ್ತೂಬ್ಬ ವೃದ್ಧೆ ದೊಣ್ಣೆ ಹಾಗೂ ಕುರ್ಚಿಯಿಂದ ಹೊಡೆದು ಕೊಂದಿರುವ ಅಮಾನವೀಯ ಘಟನೆ ಆರ್‌ಎಂಸಿ ಯಾರ್ಡ್‌ನ ಠಾಣಾ ವ್ಯಾಪ್ತಿಯ “ಉಸುರು ಫೌಂಡೇಶನ್‌ ವೃದ್ಧಾಶ್ರಮ’ದಲ್ಲಿ ನಡೆದಿದೆ.

Advertisement

ನಾಗರಬಾವಿ ನಿವಾಸಿ ಕಮಲಮ್ಮ (82) ಕೊಲೆಯಾದವರಾಗಿದ್ದು, ಆರೋಪಿ  ವಸಂತಾ (64) ಎಂಬಾಕೆಯನ್ನು ಬಂಧಿಸಲಾಗಿದೆ.  ಕಮಲಮ್ಮರನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿ ಊಟ ಕೊಡದೆ ಹಿಂಸೆ ನೀಡಿದ ಆರೋಪದಲ್ಲಿ  ವೃದ್ಧಾಶ್ರಮದ ಮುಖ್ಯಸ್ಥ ಯೋಗೇಶ್‌, ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ವಾರ್ಡ್‌ನ್‌ಗಳಾದ ಪ್ರೇಮಾ, ಜಾನ್‌, ಭಾಸ್ಕರ್‌ ಮತ್ತು ಸಿಸಿಕೆಮರಾದ ಡಿವಿಆರ್‌ ಕೊಂಡೊಯ್ದಿದ್ದ  ಮಂಜುನಾಥ್‌  ಎಂಬವರನ್ನು ಬಂಧಿಸಲಾಗಿದೆ.

ನಿವೃತ್ತ ಎಎಸ್‌ಐ ಪತ್ನಿ :

ಹಳೆ ಮದ್ರಾಸ್‌ ರಸ್ತೆಯ ಭಟ್ಟರಹಳ್ಳಿ ನಿವಾಸಿ ಕಮಲಮ್ಮ ನಿವೃತ್ತ ಎಎಸ್‌ಐ ಓರ್ವರ ಪತ್ನಿಯಾಗಿದ್ದು, ದಂಪತಿಗೆ ಇಬ್ಬರು ಪುತ್ರರು ಹಾಗೂ  ಇಬ್ಬರು ಪುತ್ರಿಯರಿದ್ದಾರೆ.  ಕಮಲಮ್ಮ  ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ  ಪುತ್ರ ರಾಮಚಂದ್ರ ಅವರು  ತಾಯಿಯನ್ನು  ವೃದ್ಧಾಶ್ರಮಕ್ಕೆ ಸೇರಿಸಿದ್ದು,  ತಿಂಗಳಿಗೆ 10 ಸಾವಿರ ರೂ. ಪಾವತಿಸುತ್ತಿದ್ದರು. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕಮಲಮ್ಮ ಕೆಲವೊಮ್ಮೆ ಜೋರಾಗಿ ಕೂಗುತ್ತಿದ್ದುದರಿಂದ ಆಕೆಯನ್ನು  ಕತ್ತಲ ಕೋಣೆಯಲ್ಲಿ  ಗೃಹ ಬಂಧನದಲ್ಲಿರಿಸಲಾಗಿತ್ತು. ಆಕೆಗೆ ಎರಡು-ಮೂರು ದಿನಕ್ಕೊಮ್ಮೆ ಊಟ ಕೊಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next