Advertisement

ಈದ್ ಮಿಲಾದ್ ಮೆರವಣಿಗೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಸಿಪಿಐಯೊಂದಿಗೆ ಯುವಕರ ವಾಗ್ವಾದ

05:22 PM Oct 09, 2022 | Team Udayavani |

ಅಂಕೋಲಾ: ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಸೌಂಡ್ ದೊಡ್ಡದಾಗಿ ಹಾಕಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸೌಂಡ್ ಕಡಿಮೆ ಮಾಡಿ ಎಂದು ಹೇಳಿದ ಸಿಪಿಐ ಸಂತೋಷ ಶೆಟ್ಟಿಯವರೊಂದಿಗೆ  ಕೆಲವು ಯುವಕರು ಉದ್ದಟತನ ವರ್ತನೆ  ತೋರಿದ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದಲ್ಲಿ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ವಾಹನಗಳಲ್ಲಿ ಟ್ಯಾಬ್ಲೋಗಳೊಂದಿಗೆ ಅಲಂಕರಿಸಿ ಮೆರವಣಿಗೆ ಮಾಡುತ್ತಿದ್ದರು. ಈ ಮೆರವಣಿಗೆಯಲ್ಲಿ ಕೆಲವರು ಡಿಜೆ ಬಳಸಿಕೊಂಡು ಸೌಂಡ್ ಕಡಿಮೆ ಮಾಡಿ ಸಾಗಿದ್ದರು. ಆದರೆ ಒಂದು ತಂಡ ಮಾತ್ರ ಜೋರು ಡಿಜೆ  ಸೌಂಡ್‌ ಮೂಲಕ ಹಾಡುಗಳನ್ನು ಹಾಕಿಕೊಂಡು ಹೋಗುತ್ತಿದ್ದರು. ಇದನ್ನು ಮೆರವಣಿಗೆಯಲ್ಲಿ ಇದ್ದ ಕೆಲವರು ಅಸಮಾಧಾನ ವ್ಯಕ್ತಪಡಿಸಿ ವಿಷಯವನ್ನು ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರ ಗಮನಕ್ಕೆ ತಂದಿದ್ದರು.

ತಕ್ಷಣ ಸಿಪಿಐ ಸಂತೋಷ ಶೆಟ್ಟಿಯವರು ಡಿಜೆ ಬಳಿ ತೆರಳಿ ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದ ಸಂದರ್ಭದಲ್ಲಿ ಆ ತಂಡದ ಯುವಕರು ಸಿಪಿಐಯೊಂದಿಗೆ ವಾಗ್ವಾದಕ್ಕಿಳಿದ್ದಿದ್ದಾರೆ. ಸಿಪಿಐ ಶಾಂತವಾಗಿ ಯುವಕರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಕೇಳದ ಹಾಗೆ ಯುವಕರು ವರ್ತಿಸಿದ್ದಾರೆ. ಬಳಿಕ ಸಮಾಧಾನದಿಂದಲೇ ಯುವಕರೊಂದಿಗೆ ಮಾತನಾಡಿ ಮೆರವಣಿಗೆ ಸಾಗಲು ಅವಕಾಶ ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next