Advertisement
ಯಾಕೋ ಚಿರತೆ ಗಕ್ಕನೆ ನಿಂತಿತು. ಆಹ್… ಈ ಚಿರತೆಯೂ ನನ್ನಂತೆಯೇ ಉಂಟಲ್ಲ. ಅದೇ ಮೀಸೆ, ಅದೇ ಕಪ್ಪುಗೋಲಿಯ ಕಣ್ಣು, ಒರಟು ಮೂಗು, ಮೈ ತುಂಬಾ ಕಪ್ಪುಚುಕ್ಕಿಗಳು… ನಾನೇನಾದರೂ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದೇನಾ ಎಂಬ ಅನುಮಾನ ಅದಕ್ಕೆ. ಅದು ನಿಧಾನಕ್ಕೆ ಹೆಜ್ಜೆ ಇಡುತ್ತಾ, ತನ್ನದೇ ಪ್ರತಿರೂಪದತ್ತ ಸಮೀಪಿಸಿದಾಗ, ಆಶ್ಚರ್ಯವೋ ಆಶ್ಚರ್ಯ.
Related Articles
Advertisement
ಟೈಗರ್ ಪೇಂಟಿಂಗ್ ಇಷ್ಟ: ನಾಗರಾಜ್‌ಗೆ ಹುಲಿಯ ಚಿತ್ರ ಬರೆಯುವುದು ಇಷ್ಟವಂತೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಚಿತ್ರಿಸಿ ರುವ ಹುಲಿ, ಜೀವ ತುಂಬಿದಂತಿದೆ. ವಾಲ್ ಪೇಂಟಿಂಗ್, ವೈಲ್ಡ್‌ಲೈಫ್ ಪೇಂಟಿಂಗ್‌ಗಳಿಗೆ ಒಂದೊಂದು ಚಿತ್ರಕ್ಕೆ ಎರಡು ದಿನ ಸಮಯ ತೆಗೆದುಕೊಳ್ಳುತ್ತಾರೆ.
ಇವರ ಚಿತ್ರಗಳು ಇಷ್ಟು ಪಫೆಕ್ಟಾಗಿ ಅರಳಲು ಇನ್ನೊಂದು ಕಾರಣ, ಇವರ ಫೋಟೊಗ್ರಫಿ ಕಲೆ. ಪ್ರತಿ ಭಾನುವಾರವೂ ಗೆಳೆಯರು, ಆಸಕ್ತರನ್ನೆಲ್ಲಾ ಸೇರಿಸಿಕೊಂಡು ಚಿತ್ರದುರ್ಗದ ಜೋಗಿಮಟ್ಟಿ, ಆಡುಮಲ್ಲೇಶ್ವರ ಭಾಗದಲ್ಲಿ ಚಾರಣ ಮಾಡುವುದು 30 ವರ್ಷದಿಂದ ಇವರು ನಿಲ್ಲಿಸಿಲ್ಲ. ಕಡಿದಾದ ಬೆಟ್ಟದ ತುದಿಯ ಗುಹೆಗಳನ್ನು ಸ್ವತ್ಛಗೊಳಿಸಿ, ಅಲ್ಲಿರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ ಬರುವುದು ಇವರ ಶ್ರದ್ಧೆಗೆ ಹಿಡಿದ ಕನ್ನಡಿ ಎನ್ನಬಹುದು.
ಕಾಡಿನ ಜಲಸಂರಕ್ಷಕ: ನಾಗರಾಜ್ ಅವರ ದಿನಚರಿ ಕೇವಲ ಬಣ್ಣಗಳ ಜೊತೆ ಮುಗಿದು ಹೋಗುವುದಿಲ್ಲ. ಇವರೊಳಗೊಬ್ಬ ಪರಿಸರ ಸಂರಕ್ಷಕನೂ ಇದ್ದಾನೆ. ಜೋಗಿಮಟ್ಟಿ ಮತ್ತಿತರೆ ಅರಣ್ಯ ಪ್ರದೇಶಗಳಲ್ಲಿ ಪುಟ್ಟ ಪುಟ್ಟ ಕಲ್ಯಾಣಿ, ಹೊಂಡ, ಹೆಬ್ಬಂಡೆಗಳ ಮೇಲೆ ನೀರು ನಿಲ್ಲುವ ದೊಣೆಗಳಿವೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮಣ್ಣು ತುಂಬಿ, ಗಿಡ ಬೆಳೆದು ನೀರು ನಿಲ್ಲದಂತಾಗಿದ್ದವು. ನಾಗರಾಜ್ ಮತ್ತವರ ತಂಡ ಕಳೆದ 3-4 ವರ್ಷಗಳಿಂದ ಸತತವಾಗಿ ಪುಟ್ಟ ಕಲ್ಯಾಣಿಗಳನ್ನು ಸcತ್ಛಗೊಳಿಸಿ, ಹೂಳು ತೆಗೆದು ನೀರು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಕಾಡು ಪ್ರಾಣಿಗಳು, ಪಕ್ಷಿ ಸಂಕುಲಕ್ಕೆ ಅನುಕೂಲವಾಗಿದೆ.
* ತಿಪ್ಪೇಸ್ವಾಮಿ ನಾಕೀಕೆರೆ