ಹೊಸದಿಲ್ಲಿ: ವಿಪಕ್ಷ ಕಾಂಗ್ರೆಸ್ ಯೂಟ್ಯೂಬ್ ನಲ್ಲಿ ಇದೇ 24ರಿಂದ “ಐಎನ್‌ಸಿ ಟಿವಿ’ ಎಂಬ ಹೆಸರಿನ ಹೊಸ ಚಾನೆಲ್ ಆರಂಭಿಸಲಿದೆ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಕ್ತಾರ ರಣದೀಪ್ ಸುರ್ಜೆವಾಲಾ ಈ ಮಾಹಿತಿ ನೀಡಿದ್ದಾರೆ. ಜತೆಗೆ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಚಾನೆಲ್ ಯಾವ ರೀತಿ ಇರಲಿದೆ ಎಂಬ ಬಗ್ಗೆ ದಿಕ್ಸೂಚಿ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಮತ್ತು ದುರ್ಬಲರ ಧ್ವನಿಯಾಗಿ ಚಾನೆಲ್ ಕಾರ್ಯ ನಿರ್ವಹಿಸಲಿದೆ ಎಂದಿದ್ದಾರೆ. ವೃತ್ತಿಪರ ಪತ್ರಕರ್ತರೊಬ್ಬರು ಅದರ ನೇತೃತ್ವ ವಹಿಸಲಿದ್ದಾರೆ. ಚಾನೆಲ್ 8 ಗಂಟೆ ಕಾಲ ನೇರಪ್ರಸಾರ ಕಾರ್ಯಕ್ರಮ ನೀಡಲಿದೆ.
ಇದನ್ನೂ ಓದಿ:ಭಾರತ ಬತ್ತಳಿಕೆಗೆ ವಿದೇಶಿ ಲಸಿಕೆ ಬಾಣ ; ಕ್ಲಿನಿಕಲ್ ಟ್ರಯಲ್ ಷರತ್ತಿನಿಂದ ವಿನಾಯಿತಿ
ಅದು ಉಪಗ್ರಹ ವಾಹಿನಿ ಅಥವಾ ಒಟಿಟಿ ಪ್ಲಾಟ್‌ಫಾರಂನಲ್ಲಿ ಲಭ್ಯ ಇರುವುದಿಲ್ಲ. ಆರಂಭದಲ್ಲಿ ಹಿಂದಿ, ಆಂಗ್ಲ ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.
ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠವಾದದ್ದು. ಆದರೆ ಪ್ರಧಾನಿ ಮೋದಿ ಅವರು ತಮ್ಮದೇ ಸ್ವಂತ ಸಿದ್ಧಾಂತವನ್ನು ಹರಡಲು ಯತ್ನಿಸುತ್ತಿದ್ದಾರೆ. ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ