ಚಿತ್ತಾಪುರ: ತಾಲೂಕಿನ ಮಾಡಬೂಳ ಗ್ರಾಮದ ಕೆಬಿಎನ್ ಮೈದಾನದಲ್ಲಿ ಶನಿವಾರ ನಡೆದ ಅರವಿಂದ ಚವ್ಹಾಣ ಟೆನ್ನಿಸ್ ಬಾಲ್ ಟೂರ್ನಾಮೆಂಟ್‌ನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.
ಕ್ರಿಕೆಟ್ ಪಂದ್ಯಾವಳಿಗೆ ಲೋಕಸಭೆ ಸದಸ್ಯ ಡಾ| ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ ಸಾಥ್ ನೀಡಿದರು. ನಂತರ ವಸತಿ ಸಚಿವ ವಿ.ಸೋಮಣ್ಣ ಬ್ಯಾಟ್ ಮಾಡಿದರು.
ಅರವಿಂದ ಚವ್ಹಾಣ ಬಾಲಿಂಗ್ ಮಾಡಿದರು. ನಂತರ ಸಂಸದ ಡಾ| ಉಮೇಶ ಜಾಧವ ಅವರು ಬ್ಯಾಟ್ ಮಾಡಿದರು. ಜಿಪಂ ಮಾಜಿ ಸದಸ್ಯ ಬಿಜೆಪಿ ಮುಖಂಡ ಅರವಿಂದ ಚವ್ಹಾಣ ಮಾತನಾಡಿ, ಹಣ, ಬೆಟ್ಟಿಂಗ್‌ಗಾಗಿ ಅಥವಾ ಪ್ರಚಾರಕ್ಕಾಗಿ ಕ್ರಿಕೆಟ್ ಪಂದ್ಯವಾಳಿ ಆಯೋಜಿಸಿಲ್ಲ. ಈ ಭಾಗದ ಕ್ರಿಕೆಟ್ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕ್ರಿಕೆಟ್ ಎಂದರೆ ಎಲ್ಲರಿಗೂ ಅಚ್ಚಮೆಚ್ಚು ಕ್ರೀಡೆ. ಹೀಗಾಗಿ ಈ ಭಾಗದಲ್ಲಿಯುವ ಕ್ರೀಡಾಪಟುಗಳಲ್ಲಿ ಪ್ರತಿಭೆ ಹೊರಹಾಕಲು ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಪಟುಗಳು ತಮ್ಮಲ್ಲಿನ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಚಿತ್ರನಟ ಅಭಿಷೇಕ ಸಣ್ಣೂರಕರ್, ಬಿಜೆಪಿ ಮುಖಂಡರಾದ ವಿಜಯಕುಮಾರ ಗುಂಡಗುರ್ತಿ, ಅನಿಲಕುಮಾರ ಜೋಶಿ, ಬಿಎಸ್‌ಪಿ ಮುಖಂಡ ಆನಂದ ಮಸ್ಕಿ ಮಾತನಾಡಿದರು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಣಮಂತ ಬೆಂಕಿ, ಮುಖಂಡರಾದ ವೀರಯ್ಯಸ್ವಾಮಿ ಮಠಪತಿ, ಮಹೇಶ ಬಟಗೇರಿ, ಶಿವಕುಮಾರ ಯಾಗಾಪುರ, ಮಲ್ಲಣ್ಣಗೌಡ ಪಾಟೀಲ, ಶರಣಗೌಡ ಪಾಟೀಲ, ನಾಗರಾಜ ಮುತ್ತಗಿ, ಪ್ರವೀಣ ನಾಮದಾರ, ಭೀಮರಾವ ಮತ್ತಿಮಡು, ಬಸವರಾಜ ಕಂಠಿ, ದೇವರಾಜ ತಳವಾರ, ಅರುಣಕುಮಾರ ಯಾಗಾಪುರ, ಶಶಿ ಪಾಟೀಲ, ಕರಣ ಹಳ್ಳದ್, ಭೀಮಣ್ಣ ತಳವಾರ, ಶಂಕರ ತಳವಾರ, ವಿಜಯಕುಮಾರ ಹಿರೇಮಠ, ಪರಮೇಶ್ವರ ಭಾಗೋಡಿ, ಶಿವರಾಜ ಗುತ್ತೇದಾರ, ಹಣಮಂತ ಯಳಮೇಲಿ, ಬಸವರಾಜ ತಳವಾರ, ಅನಂತರೆಡ್ಡಿ ಕೋರವಾರ, ಗುಂಡುಗೌಡ ಹೆಬ್ಟಾಳ, ಪ್ರತಾಪಸಿಂಗ್ ರಜಪೂತ್, ಕುಪೇಂದ್ರ ಜಾಧವ, ಮೋಹನ ಚವ್ಹಾಣ, ಅಣವೀರಯ್ಯಸ್ವಾಮಿ, ಕಾಶಿನಾಥ ಕುಲಕರ್ಣಿ, ನಾಗರಾಜ ದೇಸಾಯಿ ಇತರರು ಇದ್ದರು. ಸಿದ್ಧು ಪಾಟೀಲ ಬೆಣ್ಣೂರ ನಿರೂಪಿಸಿ, ವಂದಿಸಿದರು.