Advertisement

ಸ್ಮಾರ್ಟ್‌ ಪಾರ್ಕಿಂಗ್‌ಗೆ ಚಾಲನೆ

01:12 PM Sep 20, 2020 | Suhan S |

ಬೆಂಗಳೂರು: ನಗರದ ಕನ್ನಿಂಗ್‌ ಹ್ಯಾಮ್‌ ರಸ್ತೆ ಹಾಗೂ ಮಹಾತ್ಮಗಾಂಧಿ ರಸ್ತೆ ಸೇರಿದಂತೆ ನಗರದ ಪ್ರಮುಖ ಹತ್ತು ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆಗೆ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ‌ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಶನಿವಾರ ಚಾಲನೆ ನೀಡಿದರು.

Advertisement

ಖಾಸಗಿ ಸಹಭಾಗಿತ್ವದಲ್ಲಿ ಸೆಂಟ್ರಲ್‌ ಪಾರ್ಕಿಂಗ್‌ ಸರ್ವೀಸಸ್‌ ಸಂಸ್ಥೆ ಮೂಲಕ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಜಾರಿ ಮಾಡಲಾಗಿದ್ದು,ನಿರ್ವಹಣೆಹೊಣೆಯನ್ನು ಈ ಸಂಸ್ಥೆಗೆ ನೀಡಲಾಗಿದೆ. ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ಸೆನ್ಸಾರ್‌ ಆಧಾರಿತ ವ್ಯವಸ್ಥೆ ಇರುವ ಪಾರ್ಕಿಂಗ್‌ ವ್ಯವಸ್ಥೆ ಇದಾಗಿದ್ದು, ಇಂದಿರಾ ನಗರದಲ್ಲಿ ಇದರ ಕೇಂದ್ರ ಕಚೇರಿ ಇದೆ. ನಮ್ಮ ಬೆಂಗಳೂರು ಸ್ಮಾರ್ಟ್‌ ಪಾರ್ಕಿಂಗ್‌ ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ತಂತ್ರಾಂಶದ ಮೂಲಕ ಪಾರ್ಕಿಂಗ್‌ ಮಾಡಿ ಪಾರ್ಕಿಂಗ್‌ ಮೀಟರ್‌ ಮೂಲಕ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಿ ರಶೀದಿ ಪಡೆಯಬಹುದು. ಇದರಿಂದ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ಬರಲಿದೆ ಎಂದರು.

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಮಾತನಾಡಿ, ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್‌ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಸಾರ್ಟ್‌ ಪಾರ್ಕಿಂಗ್‌ಯೋಜನೆ ಜಾರಿ ಮಾಡಲಾಗಿದೆ. 87 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಯೋಜನೆ ಜಾರಿ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿ 7 ಕಾರು, 60ದ್ವಿಚಕ್ರ ವಾಹನಗಳನ್ನು ನಿಲುಗಡೆ ವ್ಯವಸ್ಥೆ ಇದೆ. ಮೊದಲ ಹಂತದಲ್ಲಿ ಚಾಲನೆ ನೀಡುತ್ತಿರುವ 10 ರಸ್ತೆಗಳಲ್ಲಿ 475 ಕಾರು ಮತ್ತು 510 ದ್ವಚಕ್ರ ವಾಹನ ನಿಲುಗಡೆಗೆ ಅವಕಾಶ ಇದೆ. ಎಲ್ಲ 87 ರಸ್ತೆಗಳಲ್ಲಿ ಒಟ್ಟು 8,000 ರಿಂದ 9,000 ವಾಹನ ಪಾರ್ಕಿಂಗ್‌ ಮಾಡಬಹುದು ಎಂದು ಹೇಳಿದರು.

ನಮ್ಮ ಬೆಂಗಳೂರು ಸ್ಮಾರ್ಟ್‌ ಪಾರ್ಕಿಂಗ್‌ ಆ್ಯಪ್‌ ಆಭಿವೃದ್ಧಿ ಪಡಿಸಲಾಗಿದ್ದು, ವಾಹನ ನಿಲುಗಡೆ ಬಳಿಕ, ಆ್ಯಪ್‌ ಮೂಲಕ ರಸೀದಿ ಪಡೆಯ ಬಹುದು. ಸವಾರರು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಹಾಗೂ ಯುಪಿಐನಿಂದ ಹಣ ಪಾವತಿ ಮಾಡಬಹುದು. ಶಾಸಕ ರಿಜ್ವಾನ್‌ ಹರ್ಷದ್‌, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂರಾಜು  ಹಾಗೂ ಎಚ್‌. ಎಂ.ರಮೇಶ್‌ ಗೌಡ, ಮುಖ್ಯ ಎಂಜಿನಿಯರ್‌ (ರಸ್ತೆ ಮೂಲಭೂತ ಸೌಕರ್ಯ) ಪ್ರಹ್ಲಾದ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next