Advertisement

ವಾರಿಯರ್ಸ್‌ರಿಂದ ದಸರಾಗೆ ಚಾಲನೆ

01:34 PM Oct 02, 2020 | Suhan S |

ಶ್ರೀರಂಗಪಟ್ಟಣ: ಅ.23ರಂದು ಶ್ರೀರಂಗ ಪಟ್ಟಣದ ಪಾರಂಪರಿಕ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್ ವಾರಿಯರ್ಸ್‌ಚಾಲನೆನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೋವಿಡ್‌ 19 ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈವರ್ಷ ದಸರಾವನ್ನು ಅದ್ಧೂರಿಯಿಂದ ಆಚರಣೆ ಮಾಡುತ್ತಿಲ್ಲ. ಸರ್ಕಾರವು ಅದಕ್ಕೆ ಅನುಮತಿ ನೀಡಿಲ್ಲ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕೋವಿಡ್‌ 19 ಇರುವುದರಿಂದ ಪಾರಂಪರಿಕವಾಗಿ ಬಂದಿರುವ ದಸರಾವನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ.ಆದ್ದರಿಂದಸ್ಥಳೀಯ ಪಂಚಾಯ್ತಿ ಸೇರಿದಂತೆ ತಾಲೂಕು ಆಡಳಿತ ಮಟ್ಟದಲ್ಲಿ ಹೆಚ್ಚಿನ ಜನಸಂಖ್ಯೆ ಸೇರದಂತೆ ದಸರಾವನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

150 ಮಂದಿಗೆ ಆಸನದ ವ್ಯವಸ್ಥೆ: ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಈಗಾಗಲೇ ಶ್ರೀರಂಗಪಟ್ಟಣ ದಸರಾ ಕುರಿತು ಚರ್ಚೆ ಮಾಡಿದ್ದಾರೆ. ಈ ವರ್ಷ ಆನೆ ಅಂಬಾರಿ ಇಲ್ಲದೆ ದಸರಾ ಬನ್ನಿ ಮಂಟಪದ ಬಳಿ 150 ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ನಂತರ ತಾಯಿ ಚಾಮುಂಡೇಶ್ವರಿಗೆ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಹೂವು ಹಣ್ಣುಗಳಿಂದ ಅಲಂಕಾರ ಮಾಡಿ, ರಥದ ಮೂಲಕ ದೇವಿ ಮೆರವಣಿಗೆ ಮಾಡಿ, ಪಟ್ಟಣದ ರಂಗನಾಥ ದೇವಾಲಯದ ಬಳಿ ಮೆರವಣಿಗೆ ಸ್ಥಗಿತಗೊಳಿಸಲಾಗುತ್ತದೆ ಎಂದರು.

ಮೆರವಣಿಗೆಯಲ್ಲಿ ಪಾರಂಪರಿಕ 2 ಜಾನಪದ ಸ್ಥಳೀಯ ಕಲಾ ತಂಡಗಳು ಇರುತ್ತವೆ. ಶ್ರೀರಂಗನಾಥ ದೇವಾಲಯದ ಬಳಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸಂಜೆ ಸರಳವಾದ ದೇವರಿಗೆ ಸಂಬಂಧಿಸಿದ ಸುಗಮ, ನೃತ್ಯ ಕಾರ್ಯಕ್ರಮವಿದೆ. ಸುಮಾರು100 ಜನರಿಗಷ್ಟೆ ಸೀಮಿತವಾಗಿರುತ್ತದೆ. ಅವರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಯಿಂದ ಕೋವಿಡ್‌ ಪರೀಕ್ಷೆ ಮಾಡಿಸಿ ಪ್ರವೇಶಿಸುವ ಅವಕಾಶ ಮಾಡಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಪ ವಿಭಾಗ ಅಧಿಕಾರಿ ಶಿವಾನಂದ ಮೂರ್ತಿ, ತಹಶೀಲ್ದಾರ್‌ ಎಂ.ವಿ.ರೂಪಾ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಸೇರಿದಂತೆ ತಾಪಂ, ಜಿಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಅನುದಾನ ಬಿಡುಗಡೆಗೆ ಸೂಚನೆ ಬಂದಿಲ್ಲ: ಡೀಸಿ :   ಶ್ರೀರಂಗಪಟ್ಟಣದಸರಾಮಹೋತ್ಸವಕ್ಕೆಅನುದಾನಬಿಡುಗಡೆಗೆ ಸರ್ಕಾರದಿಂದಯಾವುದೇಸೂಚನೆಬಂದಿಲ್ಲ.ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅನುದಾನಗಳ ಕುರಿತು ಮಂಡ್ಯ ಉಸ್ತುವಾರಿ ಸಚಿವರು,ಮೈಸೂರುಜಿಲ್ಲಾಧಿಕಾರಿಅವರೊಂದಿಗೆ ಜಿಲ್ಲಾಡಳಿತ ಚರ್ಚೆ, ಸಮಾಲೋಚನೆಯೊಂದಿಗೆ ಪತ್ರ ವ್ಯವ ಹಾರ ಮಾಡಲಾಗಿದೆ. ಮುಖ್ಯವಾಗಿ ಶ್ರೀರಂಗಪಟ್ಟಣ ದಸರಾ ನಡೆಯುವ ಸ್ಥಳಗಳ ಸ್ವತ್ಛಗೊಳಿಸಿ, ಸ್ಯಾನಿಟೈಸರ್‌ ಮಾಡಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌

ತಿಳಿಸಿದರು. ಸ್ಥಳೀಯ ತಾಲೂಕು ಆಡಳಿತದಿಂದ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಸ್ವಚ್ಛತಾಆಂದೋಲನಾಕಾರ್ಯಕ್ರಮಪ್ರಾರಂಭಿಸಲಾಗುತ್ತದೆ. ದಸರಾ ಆರಂಭಕ್ಕೂ ಮುನ್ನ ಶ್ರೀರಂಗನಾಥ, ನಿಮಿಷಾಂಬ ದೇವಿ ಸೇರಿದಂತೆ ಪ್ರಸಿದ್ಧ ದೇಗುಲಗಳು, ಸರ್ಕಾರಿ ಕಚೇರಿಗಳು, ಪ್ರತಿ ಗ್ರಾಪಂ ಕಚೇರಿಗಳಲ್ಲಿ ವಿದ್ಯುತ್‌ ದೀಪಗಳ ಅಲಂಕಾರಕ್ಕೆ ಸೂಚಿಸಲಾಗಿದೆ. ಬನ್ನಿ ಮಂಟಪ ಸೇರಿ ದಸರಾ ಮೆರವಣಿಗೆ ಬರುವ ದಾರಿಯಲ್ಲಿ ವಿದ್ಯುತ್‌ ದೀಪಲಂಕಾರ ಮಾಡಲು ವಿದ್ಯುತ್‌ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸ್ಥಳೀಯರು, ಸಾರ್ವಜನಿಕರು ಸರಳ ದಸರಾ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next