ಗುಂಡ್ಲುಪೇಟೆ: ತಾಲೂಕಿನ ಬೇಗೂರು ಹೋಬಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಶಾಸಕ ಸಿ.ಎಸ್.ನಿರಂಜನ ಕುಮಾರ್ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಗುರುವಾರ ಮಧ್ಯಾಹ್ನ 3.30ಕ್ಕೆ ತಾಲೂಕಿನಬೇಗೂರು ಸಮೀಪದಲ್ಲಿನಿರ್ಮಾಣವಾಗಿರುವ220 ಕಿಲೋ ವ್ಯಾಟ್ ಸಾಮರ್ಥಯದ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬೇಗೂರು ಪೊಲೀಸ್ ಠಾಣೆ ಕಟ್ಟಡವನ್ನು ಉದಾrಟಿಸುವರು. ನಂತರ ಕಮರಹಳ್ಳಿಕೆರೆಯಿಂದ ರಾಘವಾಪುರ, ಹಳ್ಳದ ಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ ಹಾಗೂ ಮಳವಳ್ಳಿ ಕೆರೆಗಳಿಗೆ ನೀರು ತುಂಬಿಸುವ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧ್ಯಕ್ಷತೆಯಲ್ಲಿ ರಾಘವಾಪುರ ಕೆರೆ ಸಮೀಪ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಕಳೆದ ಐದು ವರ್ಷಗಳ ಹಿಂದೆ 63 ಕೋಟಿ ರೂ. ವೆಚ್ಚದಲ್ಲಿ ನಂಜನಗೂಡು ಸಮೀಪದ ಗಾಂಧಿಗ್ರಾಮದಿಂದ ಕಬಿನಿ ನೀರನ್ನು ಹೋಬಳಿಯ ಕೆರೆಗಳಿಗೆ ತುಂಬಿಸುವ ಗಾಂಧಿಗ್ರಾಮ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಯ ಮೊದಲ ಹಂತದಲ್ಲಿ ನಂಜನಗೂಡು ತಾಲೂಕಿನ ಕೃಷ್ಣಾಪುರ, ಸಿಂಧುವಳ್ಳಿ ಹಾಗೂ ಲಕ್ಷ್ಮಣಾಪುರ, ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ, ತೊಂಡವಾಡಿ, ಬೆಳಚಲವಾಡಿ, ಕಮರಹಳ್ಳಿ, ರಾಘವಾಪುರ, ಹಳ್ಳದ ಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ ಹಾಗೂ ಮಳವಳ್ಳಿ ಕೆರೆಗಳು ಸೇರಿವೆ. ಇದರಿಂದ ಬೇಗೂರು ಹೋಬಳಿಯ ಕೆರೆಗಳಿಗೆ ನದಿ ಮೂಲದ ನೀರು ತುಂಬಿಸುವ ಬಹುದಿನದ ಬೇಡಿಕೆ ಈಡೇರುವ ಸಮಯ ಹತ್ತಿರವಾಗುತ್ತಿರುವುದು ಈ ಭಾಗದ ರೈತಾಪಿವರ್ಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟನೆ: ಕಡಕೊಳ ಹಾಗೂ ಚಾಮರಾಜನಗರದಲ್ಲಿ ಮಾತ್ರ ಇರುವಂತಹವಿದ್ಯುತ್ ವಿತರಣಾ ಕೇಂದ್ರ ಬೇಗೂರು ಸಮೀಪ ನಿರ್ಮಾಣವಾಗಿದೆ. ಇಲ್ಲಿಂದ ಸುತ್ತಲಿನ 66ಕಿಲೋವ್ಯಾಟ್ ಸಾಮರ್ಥಯದ ಇತರ 6 ಸ್ಟೇಷನ್ ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲಿದೆ.
ಪೊಲೀಸ್ ಠಾಣೆ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರಾಮದಲ್ಲಿ ಹಳೆಯ ಠಾಣೆಯ ಕಟ್ಟಡ ಕಿರಿದಾಗಿದ್ದರಿಂದ ಬೆಳಚಲವಾಡಿ ಗೇಟ್ ಸಮೀಪ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸದ್ಯ ತಾತ್ಕಾಲಿಕವಾಗಿ ಬಳಕೆಯಾಗುತ್ತಿದ್ದು ಗುರುವಾರದಿಂದ ಉದಾrಟನೆ ಆಗಲಿದೆ.