Advertisement

ತಾಯಿ-ಮಕ್ಕಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಸಚಿವ ಶ್ರೀರಾಮುಲು

06:45 PM Sep 29, 2019 | Sriram |

ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯನ್ನು ತಾಯಿ-ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಜತೆಗೆ ಅವಶ್ಯ ವೈದ್ಯರು, ಸಿಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿ ರಾಜ್ಯದ ಮಾದರಿ ಸರಕಾರಿ ಆಸ್ಪತ್ರೆಯನ್ನಾಗಿಸ
ಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

Advertisement

ಅವರು ಶನಿವಾರ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ ಉಡುಪಿ ವತಿಯಿಂದ 6 ಕೋ.ರೂ. ವೆಚ್ಚದಲ್ಲಿ ಕುಂದಾಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬಳಿ ನಿರ್ಮಾಣಗೊಂಡ 150 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ದಿ| ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ, 3 ದಿನದ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಯೊಳಗೆ ಕಾಲಿಟ್ಟ ಬಳಿಕ ಮಾತನಾಡಿದರು.

ಆರೋಗ್ಯ ಇಲಾಖೆಯಲ್ಲಿ ಇರುವ ವೈದ್ಯರ ಕೊರತೆ ನೀಗಿಸಲು, ಈ ಹಿಂದೆ ಇದ್ದ ಕೆಪಿಎಸ್‌ಸಿ ನೇಮಕಾತಿ ಪದ್ಧತಿ ರದ್ದು ಮಾಡಿ, ಆರೋಗ್ಯ ಇಲಾಖೆಯ ಮೂಲಕವೇ ನೇಮಕ ಮಾಡಿಕೊಳ್ಳಲಾಗುವುದು. ಎನ್‌ಆರ್‌ಎಚ್‌ಎಂ ಯೋಜನೆಯಡಿ ಕಾರ್ಯನಿರ್ವಹಿಸುವ ಶುಶ್ರೂಷಕಿ ಯರನ್ನು ಹೊರತುಪಡಿಸಿ ಕನಿಷ್ಠ ವೇತನ ಪಡೆದುಕೊಳ್ಳುವ ಶುಶ್ರೂಷಕಿಯರ ವೇತನವನ್ನು 17,500 ರೂ.ಗೆ ಹೆಚ್ಚಿಸಲಾಗುವುದು. ಆಯಾಗಳ ಸೇವೆ ಖಾಯಂ ಮಾಡಬೇಕು ಎನ್ನುವ ಬೇಡಿಕೆಯಿದ್ದು, ಈ ಕುರಿತು ಸಿಎಂ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನ್ಯಾಯ ಕೊಡಿಸಲಾಗುವುದು ಎಂದರು.

ಮಾದರಿ ವ್ಯಕ್ವಿತ್ವ
ಇಲ್ಲಿನ ಜನರ ಅನುಕೂಲಕ್ಕಾಗಿ, ಗರ್ಭಿಣಿಯರ ಪ್ರಯೋಜನಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಸಲವತ್ತುಗಳನ್ನೊಳಗೊಂಡ ಕಟ್ಟಡ ನಿರ್ಮಿಸಿಕೊಟ್ಟ ಜಿ. ಶಂಕರ್‌ ಅವರದು ಮಾದರಿ ಹಾಗೂ ಅನುಕರಣೀಯ ವ್ಯಕ್ತಿತ್ವ ಎಂದು ಶ್ಲಾ ಸಿದರು.

ನಿಯಮ ಸರಳಗೊಳಿಸಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಬಡವರ ಅನುಕೂಲಕ್ಕಾಗಿ ಅನುಷ್ಠಾನಕ್ಕೆ ತಂದಆಯುಷ್ಮಾನ್‌ ಯೋಜನೆ ಕೆಲವು ನಿಯಮಾವಳಿಗಳಿಂದಾಗಿ ಶೇ. 50ರಷ್ಟುಪ್ರಯೋಜನವಾಗಿಲ್ಲ. ಅದನ್ನು ಇನ್ನಷ್ಟು ಸರಳಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಪ್ರಸ್ತಾವನೆಗೈದರು. ಶಾಸಕರಾದ ರಘುಪತಿ ಭಟ್‌, ಬಿ.ಎಂ. ಸುಕುಮಾರ ಶೆಟ್ಟಿ, ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಕುಂದಾಪುರ ತಾಲೂಕು ಪಂಚಾ ಯ ತ್‌ ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಎಸಿ ಕೆ. ರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆಸ್ಪತ್ರೆ ಆರೋಗ್ಯಾಧಿ ಕಾರಿ ಡಾ| ರಾಬರ್ಟ್‌ ಉಪಸ್ಥಿತರಿದ್ದರು.ಸತೀಶ್‌ ಎಂ. ನಾಯಕ್‌ ಸ್ವಾಗತಿಸಿ, ಸದಾನಂದ ಬಳ್ಕೂರು ವಂದಿಸಿದರು. ಅಶೋಕ ತೆಕ್ಕಟ್ಟೆ ನಿರೂಪಿಸಿದರು.

ನಗುವಿನಿಂದ ಸ್ವಾಗತಿಸಿ…
ರೋಗಿಗಳು ಬಂದಾಗ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬಂದಿಯಂತೆ ಸರಕಾರಿ ಆಸ್ಪತ್ರೆಗೂ ರೋಗಿಗಳು ಬಂದಾಗ ನಗುಮುಖದಿಂದ ಸ್ವಾಗತಿಸಿ. ಆಗ ಅವರ ಅನಾರೋಗ್ಯ ಅರ್ಧ ವಾಸಿಯಾಗುತ್ತದೆ. ರೋಗಿಗಳಿಗೆ ಸ್ಪಂದಿಸದ ಬಗ್ಗೆ ದೂರು ಬಂದರೆ ಸುಮ್ಮನಿರಲಾರೆ. ಸರಕಾರಿ ಹಾಗೂ ಖಾಸಗಿ ಎರಡು ಕಡೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಬಗ್ಗೆ ಗಮನಕ್ಕೆ ಬಂದಲ್ಲಿ ಅಲ್ಲಿಯೇ ಅಮಾನತು ಮಾಡಲಾಗುವುದು ಎಂದು ಶ್ರೀರಾಮುಲು ಎಚ್ಚರಿಸಿದರು.

ಹಾಲಾಡಿ ಸಚಿವರಾಗ್ತಾರೆ
ಹಾಲಾಡಿ ಶ್ರೀನಿವಾಸ ಶೆಟ್ಟರು ಸಚಿವರಾಗುವುದರಲ್ಲಿ ಅನುಮಾನ ಬೇಡ ಎಂದ ಶ್ರೀರಾಮುಲು, ಜನರ ಮಧ್ಯೆಯೇ ಇರುವ ನೀವು ಸಾರ್ವಜನಿಕ ಸಮಾರಂಭ ಗಳಲ್ಲೂ ಪಾಲ್ಗೊಳ್ಳಿ; ಮಂತ್ರಿ ಯಾದರೆ ನೀವೇ ಉದ್ಘಾಟನೆ ಮಾಡಬೇಕಾಗುತ್ತದೆ. ಆದರೆ ನೀವು ಹಿಂದೆಯೇ ಉಳಿಯುತ್ತಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next