Advertisement

ವಿದ್ಯಾರ್ಥಿದೆಸೆಯಲ್ಲೇ ಸಂಶೋಧನೆಗೆ ಕರೆ

12:15 AM Oct 05, 2019 | Sriram |

ಉಡುಪಿ: ಬೇರೆ ಬೇರೆ ಹಂತಗಳ ವಿದ್ಯಾರ್ಥಿಗಳು ಸಂಶೋಧನೆಯನ್ನು ಶೈಕ್ಷಣಿಕ ವೃತ್ತಿಯಲ್ಲಿ ಅಗತ್ಯವಾಗಿ ಮತ್ತು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳಬೇಕು ಎಂದು ನಿಟ್ಟೆ ಜ| ಕೆ.ಎಸ್‌. ಹೆಗ್ಡೆ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ| ಕೆ. ಶಂಕರನ್‌ ಹೇಳಿದರು.

Advertisement

ಮಣಿಪಾಲ ಮಾಹೆ ವಿ.ವಿ.ಯ ವಾಣಿಜ್ಯ ಶಾಸ್ತ್ರ ವಿಭಾಗ ಕೆಎಂಸಿ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ಅಂತರ್‌ ವಿಭಾಗಗಳ ಅಂತಾರಾಷ್ಟ್ರೀಯ ಮಟ್ಟದ ಇ ಪೋಸ್ಟರ್‌ (ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಭಿತ್ತಿಚಿತ್ರ) ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಸಂಶೋಧನೆಯಿಂದ ವ್ಯಕ್ತಿ ತಮ್ಮ ಸುತ್ತಮುತ್ತಲಿನ ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ ಎಂದರು.

ಮಾಹೆ ಸಹಕುಲಪತಿ ಡಾ| ಪಿಎಲ್‌ಎನ್‌ಜಿ ರಾವ್‌ ಗೌರವ ಅತಿಥಿಗಳಾಗಿ ಪಾಲ್ಗೊಂಡು ಸಂಶೋಧನೆಯು ಮಾಹೆಯನ್ನು ಬೇರೆ ವಿ.ವಿ.ಗಳಿಗಿಂತ ಭಿನ್ನವಾಗಿ ಮತ್ತು ಮುಂಚೂಣಿಯಲ್ಲಿರುವಂತೆ ಮಾಡಿದೆ. ವಿದ್ಯಾರ್ಥಿ ಸಂಶೋಧಕರನ್ನು ಎಳೆವೆಯಲ್ಲಿ ಸಂಶೋಧನೆ ಯತ್ತ ಉತ್ತೇಜಿಸಬೇಕು ಎಂದು ಕರೆ ನೀಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಸಂದೀಪ್‌ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಆಯೋಜಕರಾದ ಪ್ರೊ| ಅಂಕಿತಾ ಶೆಟ್ಟಿ ಸ್ವಾಗತಿಸಿ ಪ್ರೊ| ಊರ್ಮಿಳಾ ವಂದಿಸಿದರು. ಕೋಮಲ್‌ ಜೆನಿಫ‌ರ್‌ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಸಮ್ಮೇಳನದಲ್ಲಿ ಆಡಳಿತ ನಿರ್ವಹಣೆ, ವಾಣಿಜ್ಯ, ಆರೋಗ್ಯ ನಿರ್ವಹಣೆ, ಎಂಜಿನಿಯರಿಂಗ್‌- ತಂತ್ರಜ್ಞಾನ, ವ್ಯವಹಾರ ವಿಶ್ಲೇಷಣೆ ಈ ನಾಲ್ಕು ವಿಷಯಗಳನ್ನು ಅಳವಡಿಸಲಾಗಿದೆ. ನೆದರ್‌ಲಂಡ್‌, ಫ್ರಾನ್ಸ್‌, ಯುಎಇ, ಅಫ್ಘಾನಿಸ್ಥಾನ ಸೇರಿದಂತೆ ಜಗತ್ತಿನ ವಿವಿಧ ವಿ.ವಿ.ಗಳಿಂದ 150 ವಿದ್ಯಾರ್ಥಿ ಸಂಶೋಧಕರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next