ಶಿರಸಿ: ಇಲ್ಲಿನ ಸುವರ್ಣ ಕಲಾಕಾರರ ಸಂಘದವರು ನಿರ್ಮಿಸಿದ ನೂತನ ದೈವಜ್ಞ ಸಭಾಭವನವನ್ನು ಜೂ.1 ರಂದು ಬೆಳಗ್ಗೆ 9:25 ಕ್ಕೆ ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಲಿದ್ದಾರೆ. 10 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಅನಂತಕುಮಾರ ಹೆಗಡೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ, ಶಾಸಕ ಆರ್ .ವಿ.ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಶಿರಸಿ ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟ, ಕರ್ಕಿ ದೈವಜ್ಞ ಬ್ರಾಹ್ಮಣ ಮಠದ ಕಾರ್ಯಾಧ್ಯಕ್ಷ ಆರ್.ಎಸ್. ರಾಯ್ಕರ ಉಪ್ಪೋಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ವಿದ್ವಾನ್ ಅನಂತ ಭಟ್ ಹಿರೇಮನೆ (ಗಂಗೆ), ಬನವಾಸಿ ವಿ.ಎಸ್.ಎಸ್. ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಕೃಷ್ಣರಾಯ ಕಾನಳ್ಳಿ, ಸುವರ್ಣ ಕಲಾಕಾರರ ಸಂಘದ ಮಾಜಿ ಅಧ್ಯಕ್ಷ ಗಜಾನನ ಪಾಲನಕರ, ಸುವರ್ಣ ಕೋ-ಆಪ್. ಸೊಸೈಟಿ ಮಾಜಿ ಅಧ್ಯಕ್ಷ ಸುರೇಶ ಶೇಟ್ ಪಾಲ್ಗೊಳ್ಳಲಿದ್ದಾರೆ.
ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆರ್ಣೇಕರ್ ಹುಲೇಮಳಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿರುವರು.
ಅಂದು ಮಧ್ಯಾಹ್ನ 3:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಗಂಗಾಧರ ಭಟ್ ಕಾರವಾರ, ಅಖೀಲ ಭಾರತ ದೈವಜ್ಞ ಸಮಾಜೋನ್ನತಿ ಪರಿಷತ್ ಅಧ್ಯಕ್ಷ ದಿನಕರ ಬೈಕೇರಿಕರ್ ಮುಂಬೈ, ಅಖೀಲ ಕರ್ನಾಟಕ ದೈವಜ್ಞ ಸಮಾಜದ ಅಧ್ಯಕ್ಷ ರಾಮರಾವ್ ರಾಯ್ಕರ, ಬೆಂಗಳೂರು, ದೈವಜ್ಞ ಯುವಕ ಮಂಡಳಿ ಬೆಂಗಳೂರು, ಅಧ್ಯಕ್ಷ ಮಹೇಶ ಶೇಟ್, ಹಾನಗಲ್ ದೈವಜ್ಞ ಸಮಾಜದ ಅಧ್ಯಕ್ಷ ಸುರೇಶ ಹನುಮಂತಪ್ಪ ರಾಯ್ಕರ, ಶಿರಸಿ ಸುವರ್ಣ ಕೋ-ಆಪ್. ಸೊಸೈಟಿ ಅಧ್ಯಕ್ಷ ಶ್ರೀಧರ ವೆರ್ಣೇಕರ್ ಕಾಗೇರಿ, ಸರಾಫ್ ಸಂಘದ ಅಧ್ಯಕ್ಷ ಚಂದ್ರಹಾಸ ಶೇಟ್, ಯುವಕ ಮಂಡಳಿ ಅಧ್ಯಕ್ಷ ಸುಧೀರ ವೆರ್ಣೇಕರ್, ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ವಿನೋದಾ ಶೇಟ ಹಾಗೂ ಸುವರ್ಣ ಕಲಾಕಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಸುವರ್ಣ ಕಲಾಕಾರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆರ್ಣೇಕರ್ ಹುಲೇಮಳಗಿ ಅಧ್ಯಕ್ಷತೆ ವಹಿಸಲಿದ್ದಾರೆ. ದಾನಿಗಳಿಗೆ, ಸಾಧಕರಿಗೆ ವಿಶೇಷ ಸನ್ಮಾನ ನೆರವೇರಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.