ಮಹಾನಗರ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ತತ್ತ್ವಾದರ್ಶಗಳನ್ನು ಎಳವೆಯಲ್ಲಿಯೇ ಪರಿಚಯಿಸುವ ದೃಷ್ಟಿಯಿಂದ ಕಾಲೇಜು ಹಂತದಲ್ಲಿ ವಿದ್ಯಾರ್ಥಿ ಸಂಸತ್ತನ್ನು ರಚಿಸಿ ಪದಗ್ರಹಣ ಮಾಡುವ ಕಾರ್ಯಕ್ರಮ ಕಿನ್ನಿಕಂಬಳದ ಇಲ್ಲಿನ ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಮಾಜಿ ಸಂಚಾಲಕಿ ಸಿ| ಕನ್ಸೆಟ್ಟಾ ಅವರು ವಿದ್ಯಾರ್ಥಿಸಂಸತ್ತು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಮೈಗೂ ಡಿಸಿಕೊಳ್ಳಲು ಸಹಕಾರಿ ಎಂದರು.
ಮುಖ್ಯ ಆತಿಥಿಯಾಗಿದ್ದ ಪತ್ರಕರ್ತ ಕೀರ್ತಿರಾಜ್ ಕದಂವಾಡಿ ಅವರು ಯುವಜನರ ಉತ್ತಮ ವ್ಯಕ್ತಿತ್ವದಿಂದ ಆರೋಗ್ಯ ಪೂರ್ಣ ದೇಶವನ್ನು ಕಟ್ಟ ಬಹುದು ಎಂದರು.
ಕಾಲೇಜು ಪ್ರಾಂಶುಪಾಲರಾದ ಸಿ| ಅನಿತಾ ಲಿಡಿಯಾ ಸ್ವಾಗತಿಸಿದರು. ಕಾಲೇಜು ನಾಯಕನಾಗಿ ಆಕಾಶ್ ಹಾಗೂ ಉಪನಾಯಕಿಯಾಗಿ ಒಲಿಟಾ ಪಿಂಟೊ ಮತ್ತು ಅವರ ಜತೆಗೆ 15 ಮಂದಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಆಮ್ಸಿಲ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ನಾಯಕ ಆಕಾಶ್ ವಂದಿಸಿದರು.