Advertisement
ಪಾರ್ಶ್ವವಾಯು ಪುನರ್ವಸತಿ ವಿಭಾಗವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದು, “ಲಾವಣ್ಯ’ ಕಾಸ್ಮೆಟಿಕ್ ವಿಭಾಗವನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಲಿದ್ದಾರೆ.
Related Articles
ಚರ್ಮ ಕಾಯಿಲೆ, ಮಧುಮೇಹ ಡಯಾಬಿಟೀಸ್, ತೂಕ ಹೆಚ್ಚಾಗುವುದು, ತಲೆನೋವು, ಪಾರ್ಶ್ವವಾಯು, ಗ್ಯಾಸ್ಟ್ರೈಟಿಸ್, ನಿದ್ರಾಹೀನತೆ, ಬೆನ್ನುನೋವು, ಕುತ್ತಿಗೆ ನೋವು, ಮಂಡಿನೋವು, ಮಾನಸಿಕ ಒತ್ತಡ, ಖನ್ನತೆಗೆ ಒಳಗಾದವರಿಗೆ ಒಂದು ವಾರ ವಿಶೇಷ ಆರೈಕೆಯೊಂದಿಗೆ ಚಿಕಿತ್ಸೆ (ಸ್ಟ್ರೆಸ್‌ಮ್ಯಾನೇಜ್‌ಮೆಂಟ್) ನೀಡಲಾಗುತ್ತಿದೆ. ಮಾನಸಿಕ ನೆಮ್ಮದಿ, ಮನಸ್ಸಂತೋಷ, ಆರೋಗ್ಯ ರಕ್ಷಣೆಗೆ ಬೇಕಾದ ಸೂಕ್ತ ಸಲಹೆ-ಸೂಚನೆಗಳೊಂದಿಗೆ ಮಾರ್ಗದರ್ಶನವೂ ಇಲ್ಲಿ ದೊರಕುತ್ತಿದೆ ಎಂದು ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜೇಶ್ ಬಾಯರಿ ತಿಳಿಸಿದ್ದಾರೆ.
Advertisement
ಏನಿದು “ಪಾರ್ಶ್ವವಾಯು – ಕಾಸ್ಮೆಟಿಕ್’ ವಿಭಾಗ ?ಆರೇಳು ವರ್ಷಗಳಿಂದ ಪಾರ್ಶ್ವವಾಯುವಿಗೆ ಸಂಬಂಧಪಟ್ಟಂತೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಪ್ರತ್ಯೇಕ ವಿಭಾಗವನ್ನು ತೆರೆದಿರಲಿಲ್ಲ. ಪರಿಪೂರ್ಣ ಚಿಕಿತ್ಸೆ ನೀಡುವ ಉದ್ದೇಶದಿಂದ ಪಂಚಕರ್ಮ ಚಿಕಿತ್ಸೆ, ನ್ಯಾಚುರೋಪತಿಯ ಆ್ಯಕ್ಯುಪಂಕ್ಚರ್ ಚಿಕಿತ್ಸೆ ಹಾಗೂ ಫಿಸಿಯೋ ಥೆರಪಿ ಚಿಕಿತ್ಸೆ ಇಲ್ಲಿರಲಿದೆ. ಇದರಿಂದ ಬೇಗ ಗುಣಮುಖರಾಗಲು ಸಾಧ್ಯ. ಮಾನಸಿಕ ಸದೃಢತೆ ಜತೆಗೆ ಬಸ್ತಿ ಚಿಕಿತ್ಸೆ, ಲೇಪ ಚಿಕಿತ್ಸೆ, ಧಾರಾ ಚಿಕಿತ್ಸೆ, ಷಷ್ಠಿಕಾಶಾಲಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ತಲೆಕೂದಲು ಉದುರುವುದು, ತಲೆಹೊಟ್ಟು, ಮುಖದಲ್ಲಿ ಪದೇಪದೆ ಮೊಡವೆ ಮೂಡುವುದನ್ನು ತಡೆಯಲು ಆರೇಳು ವರ್ಷಗಳಿಂದ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿಯೇ ಈಗ ವ್ಯವಸ್ಥಿತವಾಗಿ ಕಾಸ್ಮೆಟಿಕ್ ವಿಭಾಗವನ್ನು ತೆರೆಯಲಾಗಿದೆ. ಆ್ಯಕ್ಯುಪಂಕ್ಚರ್, ಮಡ್ ಥೆರಪಿ, ಮಡ್ ಬಾತ್, ಹಿಪ್ ಬಾತ್, ಸ್ಪೈನಲ್ ಬಾತ್‌ನಂತಹ ಚಿಕಿತ್ಸೆಗಳು ಲಭ್ಯವಿವೆ.