ಬೆಂಗಳೂರು: ಬೆಂಗಳೂರಿನ ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎನ್‌ಎಂಐಟಿ) ಯಲ್ಲಿ ತನ್ನ ಜಾಗತಿಕ ನಾಗರಿಕ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಅನ್ನು ಸ್ಯಾಮ್‌ಸಂಗ್ ಇಂಡಿಯಾ ಉದ್ಘಾಟಿಸಿದೆ.
ಅನ್ವೇಷಣೆಯನ್ನು ಪ್ರೋತ್ಸಾಹಿಸಲು, ಸಹಭಾಗಿತ್ವವನ್ನು ಉತ್ತೇಜಿಸಲು ಮತ್ತು ಭವಿಷ್ಯದ ತಂತ್ರಜ್ಞಾನ ವಲಯಗಳಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ದಿ ಥಿಂಗ್ಸ್, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ಮುಂದಿನ ತಲೆಮಾರಿನ ಇಂಜಿನಿಯರುಗಳನ್ನು ಪೋಷಿಸಲು ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ. ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಉಪಕ್ರಮ ಹಾಗೂ #PoweringDigitalIndia ಧ್ಯೇಯಕ್ಕೆ ಅನುಗುಣವಾಗಿ ಸ್ಯಾಮ್‌ಸಂಗ್‌ನ ಈ ಕಾರ್ಯಕ್ರಮ ಇದೆ.
ಬಿಎನ್‌ಎಂಐಟಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಸುಧಾರಿತ ತಂತ್ರಜ್ಞಾನದ ತರಬೇತಿಯನ್ನು ಪಡೆಯುತ್ತಾರೆ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್/ ಮಶಿನ್ ಲರ್ನಿಂಗ್, ಬಿಗ್ ಡೇಟಾ ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್‌ನಂತಹ ಡೊಮೇನ್‌ಗಳಲ್ಲಿ ಪ್ರಾಜೆಕ್ಟ್‌ಗಳನ್ನು ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ವೃತ್ತಿಪರರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಅಳವಡಿಕೆ, ಪ್ರಾಥಮಿಕ ಸಾಫ್ಟ್‌ವೇರ್ ಕೌಶಲಗಳು ಮತ್ತು ಸುಧಾರಿತ ಸಾಮರ್ಥ್ಯಗಳಿಂದ, ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲಗಳನ್ನು ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಸೂಕ್ತ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಅವರು ಭವಿಷ್ಯಕ್ಕೆ ಉತ್ತಮವಾಗಿ ಸಿದ್ಧವಾದಂತಾಗುತ್ತದೆ.
ಇದರ ಜೊತೆಗೆ, ಸ್ಯಾಮ್‌ಸಂಗ್ ಆರ್&ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರು (ಎಸ್‌ಆರ್‌ಐ-ಬಿ) ಇಂಜಿನಿಯರುಗಳು ಉದ್ಯಮ-ಶೈಕ್ಷಣಿಕ ವಲಯದ ಮಧ್ಯದಲ್ಲಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಎನ್‌ಎಂಐಟಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಎಸ್‌ಆರ್‌ಐ-ಬಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಮತ್ತು ಭಾರತ ಸರ್ಕಾರದ ಸ್ಪೇಸ್ ಕಮಿಷನ್‌ನ ಫಿಸಿಕಲ್ ರೀಸರ್ಚ್ ಲ್ಯಾಬೊರೇಟರ್ ಮ್ಯಾನೇಜ್‌ಮೆಂಟ್ ಕೌನ್ಸಿಲ್ ಸದಸ್ಯ, ಚೇರ್ಮನ್, ಹಾಗೂ ಇಸ್ರೋದ ಮಾಜಿ ಚೇರ್ಮನ್ ಎ.ಎಸ್. ಕಿರಣ್ ಕುಮಾರ್ ಮತ್ತು ಬಿಎನ್‌ಎಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ನ ಕಾರ್ಯದರ್ಶಿ ನಾರಾಯಣ ರಾವ್ ಆರ್ ಮಾನಯ್, ಬಿಎನ್‌ಎಂಐಟಿ ಡೀನ್ ಪ್ರೊ. ಈಶ್ವರ್ ಎನ್ ಮಾನಯ್ ಬಿಎನ್‌ಎಂಐಟಿಯಲ್ಲಿನ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಅನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವ ಯುವಕರು ತರಗತಿ ಮತ್ತು ಆನ್‌ಲೈನ್ ತರಬೇತಿಯನ್ನು ಪಡೆಯುತ್ತಾರೆ ಮತ್ತು ಎಸ್‌ಆರ್‌ಐ-ಬಿ ಮತ್ತು ಬಿಎನ್‌ಎಂಐಟಿ ಮೆಂಟರ್‌ಗಳ ಮಾರ್ಗದರ್ಶನದ ಅಡಿಯಲ್ಲಿ ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ನವೀನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲಿದ್ದಾರೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ), ಬಿಗ್ ಡೇಟಾ ಮತ್ತು ಮಶಿನ್ ಲರ್ನಿಂಗ್ (ಎಂಎಲ್) ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಅಗತ್ಯವಿರುವ ಪರಿಕರಗಳನ್ನು ಒದಗಿಸಿಕೊಡುತ್ತಿದೆ. ಈ ಪ್ರಕ್ರಿಯೆಯಲ್ಲಿರುವ ಕೊರತೆಯನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸಿಕೊಡಲು ಮತ್ತು ಈ ಮೂಲಕ ಉದ್ಯಮಕ್ಕೆ ಅವರನ್ನು ಸಿದ್ಧವಾಗಿಸಲು ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಪಠ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ.