Advertisement

ರೈಲ್ವೆ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಘಟಕ ಉದ್ಘಾಟನೆ

04:19 PM Oct 08, 2021 | Team Udayavani |

ಮೈಸೂರು: ಮೈಸೂರಿನ ರೈಲ್ವೆ ಆಸ್ಪತ್ರೆಯ ಎಲ್ಲಾ ಬೆಡ್‌ಗಳು ಈಗ ಆಕ್ಸಿಜನ್‌ ಬೆಡ್‌ಗಳಾಗಿ ಮಾರ್ಪಟ್ಟಿದೆ. 101 ಬೆಡ್‌ಗಳಿದ್ದ ಈ ಆಸ್ಪತ್ರೆಯಲ್ಲಿ 74 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗೆ ಬಳಕೆಯಾಗುತ್ತಿದ್ದು, ಉಳಿದ ಬೆಡ್‌ಗಳಲ್ಲಿ ಅನ್ಯ ರೋಗಿಗಳಿಗೆ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಹುಲ್‌ ಅಗರ್‌ವಾಲ್‌ ಹೇಳಿದರು.

Advertisement

ಆಸ್ಪತ್ರೆಯ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಸಿಜನ್‌ ಸಿಲಿಂಡರ್‌ಗಳನ್ನು ಬಳಸುವ ಮೂಲಕ ರೋಗಿಗಳಿಗೆ ಆಕ್ಸಿಜನ್‌ ಪೂರೈಸಲಾಗುತ್ತಿತ್ತು. ಈಗ ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಯಾದ ಮೇಲೆ ಆಸ್ಪತ್ರೆಯ ಎಲ್ಲಾ ಬೆಡ್‌ಗಳು ಆಕ್ಸಿಜನ್‌ ಬೆಡ್‌ಗಳಾಗಿವೆ. ಆಸ್ಪತ್ರೆಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಪ್ರಶರ್‌ ಸ್ಟಿಂಗ್‌ ಅಡಾÕಪ್ಯìನ್‌ ನಡಿ 500 ಎಲ್‌ಪಿಎಂ ಅಮ್ಲಜನಕ ಉತ್ಪಾದನಾ ಘಟಕ ನಿರ್ಮಿಸಲಾಗಿದೆ.

ಇದನ್ನೂ ಓದಿ:- ಮತ್ತೆ ‘ಟಾಟಾ ಗ್ರೂಪ್’ ತೆಕ್ಕೆಗೆ ‘ಏರ್ ಇಂಡಿಯಾ’: ಅಧಿಕೃತ ಘೋಷಣೆ

ನಿಮಿಷಕ್ಕೆ 500 ಲೀ. ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥಯ ಹೊಂದಿದೆ ಎಂದರು. ಬಳಿಕ ಸಂಸದ ಪ್ರತಾಪ ಸಿಂಹ ಅವರು ಆಕ್ಸಿಜನ್‌ ಘಟಕವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿಕಾಳಜಿಯಿಂದ ದೇಶದೆಲ್ಲೆಡೆ 1,200 ಹೆಚ್ಚು ಕಡೆ ಆಕ್ಸಿಜನ್‌ ಘಟಕ ನಿರ್ಮಿಸಲಾಗುತ್ತಿದೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಾಕಷ್ಟು ಆಕ್ಸಿಜನ್‌ ಘಟಕಗಳನ್ನು ಸ್ಥಾಪಿಸುವ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಆಕ್ಸಿಜನ್‌ ಸಮಸ್ಯೆ ಎದುರಾಯಿತು.  ಈಗ ಎಲ್ಲೆಡೆ ಆಕ್ಸಿಜನ್‌ ಪ್ಲಾಂಟ್‌ಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಸಂಸದರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next