Advertisement

ಸರ್ವ ಸುಸಜ್ಜಿತ ಕುಂಬಳೆ ಸಹಕಾರಿ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ

02:01 AM Jan 30, 2020 | Sriram |

ಕುಂಬಳೆ: ಜನರ ನಿರೀಕ್ಷೆಗೂ ಮೀರಿ ಬೆಳೆದು ನಿಂತ ಕುಂಬಳೆ ಸಹಕಾರಿ ಆಸ್ಪತ್ರೆಯ ನೂತನ ಸುಸಜ್ಜಿತ ಕಟ್ಟಡ ಜ.28 ರಂದು ಉದ್ಘಾಟನೆಗೊಂಡಿದೆ.

Advertisement

ಕುಂಬಳೆ ನಗರದಲ್ಲಿ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘ ಖರೀದಿಸಿದ 58.5 ಸೆಂಟ್ಸ್‌ ಸ್ವಂತ ಸ್ಥಳದಲ್ಲಿ ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ನೂತನ ಸಹಕಾರಿ ಆಸ್ಪತ್ರೆಯ ಬಹು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಈ ಆಸ್ಪತ್ರೆ ಕಟ್ಟಡದಲ್ಲಿ ಮೂರು ಜನರಲ್‌ ವಾರ್ಡ್‌ಗಳು, ಮಹಿಳೆಯರಿಗೆ, ಪುರುಷರಿಗೆ,ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ಗಳಿವೆ. 4 ಅಂತಸ್ತಿನ ಕಟ್ಟಡದಲ್ಲಿ ರ್‍ಯಾಂಪ್‌, ಲಿಫ್ಟ್‌ ಸೌಲಭ್ಯಗಳಿವೆ. ಐ.ಸಿ.ಯು, ಎನ್‌.ಐ.ಸಿಯು., ಶಸ್ತÅಚಿಕಿತ್ಸೆ ಕೊಠಡಿ, ಫಾರ್ಮಸಿ, ಪ್ರಯೋಗಾಲಯ, ಸ್ಕಾÂನಿಂಗ್‌, 24 ತಾಸುಗಳೂ ಚಟುವಟಿಕೆ ನಡೆಸುವ ತುರ್ತು ವಿಭಾಗದ ವ್ಯವಸ್ಥೆಗಳಿವೆ. ತ್ಯಾಜ್ಯ ಸಂಸ್ಕರಣೆ,ವಸ್ತ್ರ ಒಗೆಯುವುದಕ್ಕೆ ಇತ್ಯಾದಿಗಳಿಗೆ ಪ್ರತ್ಯೇಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.

1988ರಲ್ಲಿ ಸಹಕಾರಿ ಇಲಾಖೆಯಲ್ಲಿ ನೋಂದಣಿ ನಡೆಸಿರುವ ಜಿಲ್ಲಾ ಆಸ್ಪತ್ರೆ ಸಹಕಾರಿ ಸಂಘ ವ್ಯಾಪ್ತಿಯಲ್ಲಿ 1990ರಲ್ಲಿ ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕುಂಬಳೆ ಸಹಕಾರಿ ಆಸ್ಪತ್ರೆ ಚಟುವಟಿಕೆ ಆರಂಭಿಸಿತ್ತು. ಇದೀಗ ಭವ್ಯಭದ್ರಕಟ್ಟಡಕ್ಕೆ ಪಾದಾರ್ಪಣೆಗೈದಿದೆ.ಆಸ್ಪತ್ರೆಯಲ್ಲಿ 11 ಸ್ಥಿರ ವೈದ್ಯರು,7 ವಿಸಿಟಿಂಗ್‌ ವೈದ್ಯರ ಸಹಿತ 102 ಮಂದಿ ಸಿಬ½ಂಧಿಗಳು ಸೇವೆಯಲ್ಲಿರುವರು.ಸಂಘದ ವ್ಯಾಪ್ತಿಯಲ್ಲಿ ಚೆಂಗಳ ಇ.ಕೆ.ನಾಯನಾರ್‌ ಸ್ಮಾರಕ ಸಹಕಾರಿ ಆಸ್ಪತ್ರೆ ಮತ್ತು ಕುಂಡಂಕುಳಿಯ ಕ್ಲಿನಿಕ್‌ ಚಟುವಟಿಕೆ ನಡೆಸುತ್ತಿವೆ. ರಾಜ್ಯದಲ್ಲಿ ಎರಡು ಆಸ್ಪತ್ರೆಗಳು ಕಾರ್ಯಾಚರಿಸುತ್ತಿರುವ ಜಿಲ್ಲೆಯ ಏಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದಾಗಿದೆ ಎಂದು ಆಸ್ಪತ್ರೆಕಟ್ಟಡವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next