Advertisement

Manipal ಕೈಗಾರಿಕೆ ಸಂಶೋಧನೆಗಾಗಿ ಮಾಹೆ- ಷ್ನೇಯ್ಡರ್ ಎಲೆಕ್ಟ್ರಾನಿಕ್‌ ಕೇಂದ್ರ ಉದ್ಘಾಟನೆ

12:07 AM Feb 03, 2024 | Team Udayavani |

ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯ, ಡಾ| ಟಿಎಂಎ ಪೈ ಎಂಡೋಮೆಂಟ್‌ ಚೇರ್‌ ಮೂಲಕ ಬೆಂಗಳೂರಿನ ಷ್ನೇಯ್ಡರ್ ಎಲೆಕ್ಟ್ರಿಕಲ್‌ ಜತೆಗಿನ ಸಹಯೋಗದೊಂದಿಗೆ ಇಂಟಲಿಜೆಂಟ್‌ ಟೆಕ್ನಾಲಜೀಸ್‌ನಲ್ಲಿ ಕೈಗಾರಿಕೆ ಸಂಶೋಧನೆಗೆ ಎಲೆಕ್ಟ್ರಾನಿಕ್‌ ಕೇಂದ್ರವನ್ನು ಉದ್ಘಾಟಿಸಲಾಯಿತು.

Advertisement

ಸುಧಾರಿತ ಕೈಗಾರಿಕ ಯಾಂತ್ರೀಕೃತಗೊಂಡ ಉಪಕರಗಳು ಮತ್ತು ಕಂಪ್ಯೂಟಿಂಗ್‌ ತಂತ್ರಜ್ಞಾವನ್ನು ಒಳಗೊಂಡಿರುವ ಈ ಕೇಂದ್ರವನ್ನು ಜ. 29ರಂದು ಮಾಹೆ ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌, ಷ್ನೇಯ್ಡರ್ ಸಂಸ್ಥೆಯ ಆರ್‌ ಆ್ಯಂಡ್‌ ಡಿ ವಿಭಾಗ ಉನ್ನತ ಅಧಿಕಾರಿಗಳಾದ ಆರತಿ ಶರ್ಮಾ, ಜಯಂತ್‌ ಲಕವಲ್ಲಿ ಉದ್ಘಾಟಿಸಿ, ಶುಭಹಾರೈಸಿದರು.

ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ, ಡಾ| ಟಿಎಂಎ ಪೈ ಎಂಡೋಮೆಂಟ್‌ ಮುಖ್ಯಸ್ಥ ಡಾ| ಮನೋಹರ್‌ ಪೈ ಎಂ.ಎಂ., ಷ್ನೇಯ್ಡರ್ ಎಲೆಕ್ಟ್ರಿಕಲ್‌ ತಜ್ಞರಾದ ವಿವೇಕ್‌ ಖಂಡೇಲ್ವಾಲ್‌, ನಿತಿನ್‌, ದಿಗಂಬರ ಅವರು ಕೇಂದ್ರದ ಕಾರ್ಯಾಚರಣೆ ಕುರಿತು ಹಲವು ವಿಷಯ ಹಂಚಿಕೊಂಡರು.

ಐಸಿಇ ಮುಖ್ಯಸ್ಥ ಡಾ| ಶ್ರೀಶ ಸಿ. ವಂದಿಸಿದರು. ಐಇಸಿ ವಿಭಾಗದ ಚೆಂಚು ಸಾಯಿಬಾಬ, ನೆವಿನ್‌ ಆಗಸ್ಟಿನ್‌, ಡಾ| ನಿಖೀಲ್‌ ಪಚೌರಿ, ಡಾ| ವಿಜಯ್‌ ಮೋಹನ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next