Advertisement

ಕುಂದಾಪುರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ

11:09 PM Oct 19, 2019 | Sriram |

ಕುಂದಾಪುರ: ಮಕ್ಕಳ ಸುಪ್ತ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಿದಾಗ ಅದು ವ್ಯಕ್ತವಾಗಲು ಸಾಧ್ಯ. ಉದಯವಾಣಿ ಇಂತಹ ಅನೇಕ ಪ್ರತಿಭಾ ಪ್ರೋತ್ಸಾಹದ ಕೆಲಸಗಳನ್ನು ಅನೇಕ ಸಮಯದಿಂದ ಮಾಡಿಕೊಂಡು ಬಂದಿದೆ ಎಂದು ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್‌ ಎಜುಕೇಶನ್‌ ಕುಂದಾಪುರ ಇದರ ಮುಖ್ಯಸ್ಥ ಎನ್‌. ಭರತ್‌ ಶೆಟ್ಟಿ ಹೇಳಿದರು.

Advertisement

ಅವರು ಶನಿವಾರ ಭಂಡಾರ್‌ಕಾರ್ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ನ ಪ್ರಧಾನ ಪ್ರಾಯೋಜಕತ್ವದಲ್ಲಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ, ಉದಯ ಜುವೆಲರ್ಸ್‌ ಕುಂದಾಪುರ, ರುಪೀ ಮಾಲ್‌ ಬೈಂದೂರು, ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್‌ ಎಜುಕೇಶನ್‌ ಕುಂದಾಪುರ , ಮಾತಾ ಮೊಂಟೆಸರಿ ನರ್ಸರಿ ಎಲ್‌ಕೆಜಿ, ಯುಕೆಜಿ ಸ್ಕೂಲ್‌ ಕೋಣಿ ಕುಂದಾಪುರ, ಕ್ಯಾಂಪ್ಕೋ ಲಿಮಿಟೆಡ್‌, ಮಾಡರ್ನ್ ಕಿಚನ್‌ ವೇಫ‌ರ್ಸ್‌, ಹ್ಯಾಂಗ್ಯೋ ಐಸ್‌ಕ್ರೀಮ್‌ ಅವರ ಸಹಪ್ರಾಯೋಜಕತ್ವದಲ್ಲಿ ಆರ್ಟಿಸ್ಟ್‌ ಫೋರಂ ಉಡುಪಿ ಸಹಯೋಗದಲ್ಲಿ “ಉದಯವಾಣಿ’ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ  -2019′ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌. ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿ, ಉದಯವಾಣಿ ಪತ್ರಿಕೆಯು ಬೇರೆ ಬೇರೆ ರೀತಿಯಲ್ಲಿ ಓದುಗರ ಜತೆ ಬೆರೆಯುತ್ತಿದ್ದು ಓದುಗರಿಗೆ ಕಾಲ ಕಾಲಕ್ಕೆ ಸ್ಪಂದಿಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಹೊಸತನದ ಕಾರ್ಯಕ್ರಮಗಳು ನಡೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಉದಯ ಜುವೆಲರ್ಸ್‌ನ ಮಾಲಕ ಉದಯ್‌ ಕುಮಾರ್‌ ಶೇಟ್‌, ಉದಯವಾಣಿ ಮಾರುಕಟ್ಟೆ ವಿಭಾಗ ಸೀನಿಯರ್‌ ಎಕ್ಸ್‌ಕ್ಯೂಟಿವ್‌ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಆರ್ಟಿಸ್ಟ್‌ ಫೋರಂನ ಸಕು ಪಾಂಗಾಳ ಸ್ಪರ್ಧೆಯ ಕುರಿತು ವಿವರ ನೀಡಿದರು. ಉಪ ಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ ಪ್ರಸ್ತಾವಿಸಿದರು. ಪ್ರಸರಣ ವಿಭಾಗದ ಅಸಿಸ್ಟೆಂಟ್‌ ಮೆನೇಜರ್‌ ಪ್ರಕಾಶ್‌ ನಿರ್ವಹಿಸಿದರು. ಹಿರಿಯ ವರದಿಗಾರ ಪ್ರಶಾಂತ್‌ ಪಾದೆ ಸ್ವಾಗತಿಸಿದರು. ಆರ್ಟಿಸ್ಟ್‌ ಫೋರಂನ ಕಲಾವಿದ ನಾಗರಾಜ್‌ ಹನೆಹಳ್ಳಿ ವಂದಿಸಿದರು. ಮಾರುಕಟ್ಟೆ ವಿಭಾಗದ ಹರೀಶ್‌, ಪ್ರಸರಣ ವಿಭಾಗದ ವಿಶ್ವನಾಥ್‌ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.

Advertisement

ಸಹ ಪ್ರಾಯೋಜಕರಾದ ಮಾತಾ ಮೊಂಟೆಸರಿ ನರ್ಸರಿ ಎಲ್‌ಕೆಜಿ, ಯುಕೆಜಿ ಸ್ಕೂಲ್‌ ಕೋಣಿ ಕುಂದಾಪುರ ಇದರ ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ , ಉದಯ ಜುವೆಲರ್ಸ್‌ನ ಪಾಲುದಾರ ಅಕ್ಷಯ್‌ ಶೇಟ್‌, “ಉದಯವಾಣಿ’ ಪ್ರಾಡೆಕ್ಟ್ ಮತ್ತು ಮಾರುಕಟ್ಟೆ ವಿಭಾಗದ ಡಿಜಿಎಂ ಸತೀಶ್‌ ಶೆಣೈ, ಮಾರುಕಟ್ಟೆ ವಿಭಾಗ ಉಡುಪಿ ಜಿಲ್ಲಾ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ಉಪಸ್ಥಿತರಿದ್ದರು.

ಪ್ರತೀ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ, ತೃತೀಯ ಮತ್ತು ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಬಹುಮಾನವು ನಗದು, ಫ‌ಲಕ ಮತ್ತು ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ತಾಲೂಕು ಮಟ್ಟದ ಸ್ಪರ್ಧೆಗಳ ಫ‌ಲಿತಾಂಶ ಮತ್ತು ಬಹುಮಾನ ವಿಜೇತರ ಚಿತ್ರಗಳನ್ನು “ಉದಯವಾಣಿ’ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮುಂದೆ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಹ್ವಾನಿಸಲಾಗುವುದು.

– ಸ್ಪರ್ಧೆಗಿಂತ ಎರಡು ತಾಸು ಮುನ್ನವೇ ಸಭಾಂಗಣಕ್ಕೆ ಬರತೊಡಗಿದ ಚಿಣ್ಣರು
– ಹಿಂದಿನ ವರ್ಷಕ್ಕಿಂತ ಎರಡುಪಟ್ಟು ಅಧಿಕ ಮಕ್ಕಳು ಭಾಗಿ
– ವಿಶೇಷಚೇತನ ಮಕ್ಕಳಿಂದಲೂ ಚಿತ್ರ ಚಿತ್ತಾರ
– ಮಕ್ಕಳ ಕಲರವದಿಂದ ತುಂಬಿದ ಸಭಾಂಗಣ
– ಪೋಷಕರಿಂದಲೂ ಉತ್ತಮ ಸ್ಪಂದನೆ
– ಮಕ್ಕಳು ಬಿಡಿಸಿದ ಚಿತ್ರಗಳ ಛಾಯಾಚಿತ್ರ ತೆಗೆಯಲು ಮುಗಿಬಿದ್ದ ಪೋಷಕರು
– ಸೀನಿಯರ್‌ ವಿಭಾಗಕ್ಕೆ ಐದು ವಿಷಯಗಳನ್ನು ಸ್ಥಳದಲ್ಲಿಯೇ ಚೀಟಿ ಎತ್ತುವ ಮೂಲಕ ನೀಡಲಾಯಿತು.
– ಕುಂದಾಪುರ, ಬೈಂದೂರು ತಾಲೂಕಿನ 700ರಷ್ಟು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
– ಭಾಗವಹಿಸಿದ ಎಲ್ಲರಿಗೆ ಪ್ರಮಾಣಪತ್ರ, ಗಿಫ್ಟ್ ಹ್ಯಾಂಪರ್‌, ಗಿಫ್ಟ್ ವೋಚರ್‌ ಹಾಗೂ ಕೊಡುಗೆಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next