Advertisement

Mangaluru ಕುಳಾಯಿಯಲ್ಲಿ ಇಸ್ಕಾನ್‌ ಶ್ರೀ ರಾಧಾ ಗೋವಿಂದ ಮಂದಿರ ಲೋಕಾರ್ಪಣೆ

12:27 AM Aug 21, 2024 | Team Udayavani |

ಕುಳಾಯಿ: ಭಕ್ತಿ ವೇದಾಂತ ಶ್ರೀಲ ಪ್ರಭುಪಾದರಿಂದ ಸ್ಥಾಪಿಸಿರುವ ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌ (ಇಸ್ಕಾನ್‌) ವತಿಯಿಂದ ಮಂಗಳೂರಿನ ಕುಳಾಯಿಯಲ್ಲಿ 25 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ರಾಧಾ ಗೋವಿಂದ ಮಂದಿರವು ಸೋಮವಾರ ಲೋಕಾರ್ಪಣೆಗೊಂಡಿದೆ.

Advertisement

ನೂತನ ದೇವಾಲಯದಲ್ಲಿ ಶ್ರೀ ರಾಧಾ ಗೋವಿಂದ ಮತ್ತು ಇಸ್ಕಾನ್‌ ಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಮಂಗಳಾರತಿ ಅನಂತರ ಅಭಿಷೇಕ ಮತ್ತು ದೀûಾ ಹೋಮ ನೆರವೇರಿತು. ಇಸ್ಕಾನ್‌ ಸನ್ಯಾಸಿ, ಗುರು ಮತ್ತು ಜಿಬಿಸಿ ಜಯಪಾತಕ ಸ್ವಾಮಿ ಮಹಾರಾಜರು ವರ್ಚುವಲ್‌ ಮೂಲಕ ಭೇಟಿ ಮಾಡಿದರು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಜರಗಿತು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಇಸ್ಕಾನ್‌ ಸನ್ಯಾಸಿ ಭಕ್ತಿ ಪ್ರಚಾರ್‌ ಪರಿವ್ರಾಜಕ ಸ್ವಾಮಿ ಮಹಾರಾಜ್‌, ಇಸ್ಕಾನ್‌ ಪರೀûಾ ಮಂಡಳಿ ಅಧ್ಯಕ್ಷ ಅತುಲ್‌ ಕೃಷ್ಣ ದಾಸ್‌, ಶ್ರೀಲ ಪ್ರಭುಪಾದರ ಹಿರಿಯ ಶಿಷ್ಯರು ಮತ್ತು ಪ್ರಚಾರಕ ಜೀವನಾಥ್‌ ದಾಸ್‌, ಇಸ್ಕಾನ್‌ ಚೆನ್ನೈ ಅಧ್ಯಕ್ಷೆ ಸುಮಿತ್ರಾ ಕೃಷ್ಣ ದಾಸ್‌, ಗಣ್ಯರು, ಕೃಷ್ಣ ಭಕ್ತರು ಉಪಸ್ಥಿತರಿದ್ದರು.

ವಿಶೇಷತೆಗಳು
ಜಗತ್ತಿನಾದ್ಯಂತವಿರುವ ಭಕ್ತರಿಗೆ ವಸತಿ ತರಬೇತಿ ಶಿಕ್ಷಣ (ಆಫ್ಲೈನ್‌ ಭಗವದ್ಗೀತೆ ಕೋರ್ಸ್‌) ಸಾಂಸ್ಕೃತಿಕ-ಆಧ್ಯಾತ್ಮಿಕ ಕಾರ್ಯಕ್ರಮಗಳು, ಪ್ರತಿದಿನ ಆನ್‌ಲೈನ್‌ ತರಗತಿಗಳು (ಈ ತರಗತಿಗಳಲ್ಲಿ ಆರಂಭಿಕ, ಮಧ್ಯಾಂತರ ಮತ್ತು ಮುಂದುವರಿದ ಹಂತಗಳು), ವರ್ಣ ಚಿತ್ರ ಗ್ಯಾಲರಿ, ಭಕ್ತರಿಗೆ ಉಚಿತ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next