Advertisement

ಜನಧ್ವನಿಯಾಗಿ ಹೋರಾಟಕ್ಕೆ ಮುಂದಾಗಿ

12:01 PM Oct 26, 2021 | Team Udayavani |

ಆಳಂದ: ಕನ್ನಡ ನಾಡು, ನುಡಿ ಗಡಿ ಭಾಗದ ಜನಪರ ಬೇಡಿಕೆಗಾಗಿ ಪ್ರಾಮಾಣಿಕತೆ ಮೈಗೂಡಿಸಿಕೊಂಡು ಜನಧ್ವನಿಯಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಕೊರಳ್ಳಿ ಅವರು ಹೇಳಿದರು.

Advertisement

ತಾಲೂಕಿನ ಎಲೆನಾವದಗಿ ಗ್ರಾಮದಲ್ಲಿ ಜಯ ಕರ್ನಾಟಕ ವೇದಿಕೆಯ ಗ್ರಾಮ ಶಾಖೆ ಉದ್ಘಾಟನೆ ಕೈಗೊಂಡು ಅವರು ಮಾತನಾಡಿದರು.

ತಾಲೂಕಿನಲ್ಲಿ ಭ್ರಷ್ಟಾಚಾರ ನಿವಾರಣೆ ಮತ್ತು ಕನ್ನಡ ಕಾರ್ಯಕ್ಕೆ ಸದಾ ನಡೆಸಿದ ಹೋರಾಟಕ್ಕೆ ಕಾರ್ಯಕರ್ತರೆ ಆಸ್ತಿಯಾಗಿದ್ದು, ಮುಂದೆಯೂ ಹಳ್ಳಿಯ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಯಾರ ಬೆದರಿಕೆ, ಒತ್ತಡಕ್ಕೆ ಮಣಿಯದೆ ಅನ್ಯಾಯದ ಮತ್ತು ಭ್ರಷ್ಟಾಚಾರ ವಿರುದ್ಧ ಧ್ವನಿಯಾಗಿ ನಿಂತು ಹೋರಾಡಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಆಳಂದ ಸಂಸ್ಥಾನ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಬಸವರಾಜ ಕೊರಳ್ಳಿ ನೇತೃತ್ವದಲ್ಲಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಜನಪರ ಹೋರಾಟದಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇನ್ನೂ ಮುಂದೆಯೂ ಸಂಘಟನೆಯ ಉತ್ತಮವಾಗಿ ಬೆಳೆದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಏರಿಕೆ, 18,200ರ ಗಡಿಯಲ್ಲಿ ನಿಫ್ಟಿ

Advertisement

ಮುಖಂಡ ಸಿದ್ಧರೂಢ ಸರಸಂಬಿ, ಆನಂದರಾವ್‌ ಪಾಟೀಲ, ವೇದಿಕೆಯ ತಾಲೂಕು ಅಧ್ಯಕ್ಷ ನಾಗರಾಜ ಘೋಡಕೆ, ಉಪಾಧ್ಯಕ್ಷ ಸುನೀಲ ಐರೋಡಗಿ, ಕಾರ್ಯದರ್ಶಿ ಶರಣು ಕಲಕರ್ಣಿ, ಮಾದನಹಿಪ್ಪರಗಾ ವಲಯ ಅಧ್ಯಕ್ಷ ಧರೆಪ್ಪ ಜಕಾಪೂರೆ, ನಿಂಬರಗಾ ವಲಯ ಅಧ್ಯಕ್ಷ ನೀಲಕಂಠ, ಉಪನ್ಯಾಸಕ ಸಂಜಯ ಪಾಟೀಲ, ಯುವ ಅಧ್ಯಕ್ಷ ಪ್ರತೀಕ ಆಲೂರೆ ಸೇರಿ ಗ್ರಾಮದ ಪ್ರಮುಖರು ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಎಲೆನಾವದಗಿ ಜನಪರ ವೇದಿಕೆಗೆ ಅಧ್ಯಕ್ಷರಾಗಿ ದತ್ತು ಪೂಜಾರಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಬಿರಾದಾರ ಹಾಗೂ ಕಾರ್ಯದರ್ಶಿಯಾಗಿ ಗಣಪತಿರಾವ್‌ ಪಾಟೀಲ ಅವರನ್ನು ನೇಮಕ ಮಾಡಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next