ಅತ್ತಾವರ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಹೆಣ್ಣು ಮಕ್ಕಳ ಸ್ವರಕ್ಷಣ ತರಬೇತಿಯ ಉದ್ಘಾಟನ ಕಾರ್ಯಕ್ರಮ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿತು.
ಕರಾಟೆಯಿಂದ ಆತ್ಮವಿಶ್ವಾಸ ವೃದ್ಧಿ
ಉದ್ಘಾಟಿಸಿದ ಮೇಯರ್ ಕವಿತಾ ಸನಿಲ್ ಮಾತನಾಡಿ, ಕರಾಟೆ ತರಬೇತಿಯು ನಿರಂತರವಾಗಿ ನಡೆಯಬೇಕು. ಆಗ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕರಾಟೆಯು ಕೇವಲ ಸಾಧನೆಗೆ ಸೀಮಿತವಾಗದೆ ಆರೋಗ್ಯ ಮತ್ತು ಆತ್ಮರಕ್ಷಣೆಗೆ ದಾರಿಯಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ಮಾತನಾಡಿ, ಶಿಕ್ಷಣವನ್ನು ಮಾಧ್ಯಮದಿಂದ ಅಳೆಯುವುದು ಸರಿಯಲ್ಲ. ಕಲಿಯುವ ಮನಸ್ಸುಗಳು ಸಾಧನೆಯನ್ನು ರೂಪಿಸುತ್ತವೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೊರಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಗೀತಾ ಶ್ಯಾನುಭೋಗ್ ಮುಖ್ಯಅತಿಥಿಯಾಗಿದ್ದರು. ದೈಹಿಕ ಶಿಕ್ಷಣ
ಪರಿವೀಕ್ಷಕ ಗುರುನಾಥ ಬಿ. ಬಾಗೇವಾಡಿ ಪ್ರಸ್ತಾವಿಸಿದರು. ಮುಖ್ಯ ಶಿಕ್ಷಕಿ ವಿನೋದಾ ಬಿ. ಸ್ವಾಗತಿಸಿ, ಲಿಲ್ಲಿ ಪಾಯಸ್ ವಂದಿಸಿದರು. ಸುಚೇತಾ ಕಾರ್ಯಕ್ರಮ ನಿರ್ವಹಿಸಿದರು.