Advertisement

ಕೋವಿಡ್‌ ಸ್ಪೆಷಲ್‌ ವಾರ್ಡ್‌ ಉದ್ಘಾಟನೆ

02:16 PM Aug 09, 2020 | Suhan S |

ಶಿಗ್ಗಾವಿ: ಕೋವಿಡ್‌ ಸ್ಪೇಷಲ್‌ ವಾರ್ಡ್‌ನಲ್ಲಿ 50 ಬೆಡ್‌ಗಳ ಮೀಸಲು ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಹೈಪ್ರಷರ್‌ ಆಕ್ಸಿಜನ್‌ ಕೂಡಾ ಇರುತ್ತದೆ. ಯಾವುದೇ ಕೋವಿಡ್‌ ರೋಗಿಗೆ ಉಸಿರಾಟದ ತೊಂದರೆಯಾದರೆ ತಕ್ಷಣ ಚಿಕಿತ್ಸೆ ಕೊಡುವ ಎಲ್ಲ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಸ್ಪೇಷಲ್‌ ವಾರ್ಡ್‌ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆ ತಾಲೂಕು ಮಟ್ಟಕ್ಕೂ ಬರಲಿದೆ. ಇಲ್ಲಿ ಈಗಾಗಲೇ 3 ವೆಂಟಿಲೇಟರ್‌ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಏಳು ವೆಂಟಿಲೇಟರ್‌ಗಳನ್ನು ಜೋಡಿಸಿ ಒಟ್ಟು ಹತ್ತು ವೆಂಟಿಲೇಟರ್‌ಗಳ ಆಸ್ಪತ್ರೆಯನ್ನು ಮಾಡಲಾಗುವುದು. ಈಗಾಗಲೇ ಸವಣೂರಿಗೂ 30 ಬೆಡ್‌ನ‌ ಆಸ್ಪತ್ರೆ ಉದ್ಘಾಟಿಸಲಾಗಿದ್ದು, ಇನ್ನೂ 50 ಬೆಡ್‌ ವ್ಯವಸ್ಥೆ ಮಾಡಲಾಗುವುದು ಎಂದರು. ತಾಲೂಕಿನ ಬಂಕಾಪೂರದಲ್ಲಿಯೂ ಕೂಡಾ ವಿಶೇಷ ಕೋವಿಡ್‌ ಆಸ್ಪತ್ರೆಯನ್ನು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲಿಯೂ 30 ಬೆಡ್‌ನ‌ ವಿಶೇಷ ಆಸ್ಪತ್ರೆಯನ್ನು ಶೀಘ್ರದಲ್ಲಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹಾವೇರಿ ಸಂಸದ ಶಿವಕುಮಾರ ಉದಾಸಿ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜು, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಹನುಮಂತಪ್ಪ ಪಿ.ಎಚ್‌., ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ, ಡಾ| ವಿವೇಕ ಜೈನ್‌ಕೇರಿ, ತಾಲೂಕು ಆರೋಗ್ಯಾಧಿಕಾರಿ ಡಾ| ಹನುಮಂತಪ್ಪ ಕುಡಚಿ, ಡಾ| ಸುಭಾಸ ಲೋಕರೆ, ಜಿ.ಪಂ. ಸದಸ್ಯೆ ಶೋಭಾ ಗಂಜಿಗಟ್ಟಿ, ಮಾಜಿ ಸದಸ್ಯ ಶಶಿಧರ ಹೊಣ್ಣನವರ, ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮಾಜಿ ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ಶಿಗ್ಗಾವಿ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರ್ಕಾಣಿ, ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್‌ ವಿಭಾಗದ ಎಇಇ ಸೈಯ್ಯದ್‌, ಲೋಕೋಪಯೋಗಿ ಇಲಾಖೆ ಎಇಇ ವಿವೇಕ ಚಿಕ್ಕಮಠ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next