Advertisement
ವಿಕಾರ್ ಜನರಲ್ ಫಾ| ಜೋಸ್ ವಲಿಯಪರಂಬಿಲ್, ಸಿದ್ಧಾಪುರ ಫೋರೆನ್ ವಿಕಾರ್ ಫಾ| ಮಾಣಿ ವೆಳುತ್ತೆಡತ್ತ್ ಪರಂಬಿಲ್ ಭಾಗವಹಿಸಲಿದ್ದಾರೆ. ರಾತ್ರಿ ಸಾರ್ವಜನಿಕ ಸಮ್ಮೇಳನದಲ್ಲಿ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನವಿದೆ.
ಧರ್ಮಪ್ರಾಂತದ ಫಾ| ಜೋಸೆಫ್ ಮೇಙಕುನ್ನೇಲ್, ಕಂಕನಾಡಿಯ ಫಾ| ಜೋಸೆಫ್ ಕೆಳಂಪರಂಬಿಲ್, ಉಜಿರೆಯ ಫಾ| ಜೋಸೆಫ್ ಮುಕ್ಕಾಟ್ ಭಾಗವಹಿಸಲಿದ್ದಾರೆ. ಎ. 16ರಂದು ವಿಧಾನಪೂರ್ವಕ ಬಲಿಪೂಜೆ ನಡೆಯಲಿದ್ದು, ಬೆಳ್ತಂಗಡಿ ಬಿಷಪ್ ಹೌಸ್‌ನ ಫಾ| ಅಬ್ರಾಹಂ ಪಟ್ಟೇರಿಲ್, ಫೋರೆನ್ ಏಕಾರ್‌ನ ಫಾ| ಜೋಸೆಫ್ ಕುರಿಯಾಳಶ್ಯೇರಿ, ಗುತ್ತಿಗಾರಿನ ಫಾ| ತೋಮಸ್ ಪನಚಿಕಲ್, ಜ್ಞಾನನಿಲಯದ ಫಾ| ಜೋಸೆಫ್ ಮಟ್ಟಂ ಭಾಗವಹಿಸಲಿದ್ದಾರೆ. ಸಿಮಿತೇರಿ ಸಂದರ್ಶನದಲ್ಲಿ ವಿಕಾರ್ ಜನರಲ್ ಫಾ| ಜೋಸ್ ವಲಿಯ ಪರಂಬಿಲ್ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.