ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ)ಯ 2,941 ಕೋಟಿ ರೂ. ವೆಚ್ಚದ 90 ಮೂಲಸೌಕರ್ಯ ಯೋಜನೆಗಳನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.
ಜಿಲ್ಲೆಯ ಬಿಷ್ನಾಹ್-ಕೌಲ್ಪುರ್-ಫುಲ್ಪುರ್ ಮಾರ್ಗ ದಲ್ಲಿ 422.9 ಮೀಟರ್ ಉದ್ದದ ದೇವಕ್ ಸೇತುವೆ ಯನ್ನು ರಕ್ಷಣ ಸಚಿವರು ಲೋಕಾರ್ಪಣೆ ಮಾಡಿದರು. ಈ ವೇಳೆ ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಭಾರತೀಯ ಭೂಸೇನೆ ಮತ್ತು ವಾಯು ಸೇನೆಯ ಹಿರಿಯ ಅಧಿಕಾರಿಗಳು ಇದ್ದರು. ಉಳಿದ 89 ಯೋಜನೆಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಲಾಯಿತು.
ಅರುಣಾಚಲ ಪ್ರದೇಶದ 36 ಯೋಜನೆಗಳು, ಲಡಾಖ್‌ನ 25, ಜಮ್ಮು ಮತ್ತು ಕಾಶ್ಮೀರದ 11, ಮಿಜೋರಾಂನ 5, ಹಿಮಾಚಲ ಪ್ರದೇಶದ ಮೂರು, ಸಿಕ್ಕಿಂ ಮತ್ತು ಉತ್ತರಾಖಂಡದಲ್ಲಿ ತಲಾ ಎರಡು, ನಾಗಾಲ್ಯಾಂಡ್, ರಾಜಸ್ಥಾನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಲಾ ಒಂದು ಯೋಜನೆಯನ್ನು ಉದ್ಘಾಟಿಸಲಾಯಿತು.
“ಡಿ’ ಆಕಾರದ ಸೇತುವೆ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ಬಲಿಪರಾ-ಚರ್ದುರಾ- ತವಾಂಗ್ ಮಾರ್ಗದಲ್ಲಿ 5,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ನೆಚಿಫುು ಸುರಂಗವನ್ನು ವಿಶೇಷವಾಗಿ ಇಂಗ್ಲೀಷ್ ಅಕ್ಷರ “ಡಿ’ ಆಕಾರದಲ್ಲಿ ನಿರ್ಮಿಸಲಾಗಿದೆ.