Advertisement
ಕಾರ್ಕಳದ ನಿಟ್ಟೆ ಗ್ರಾ.ಪಂ. ವ್ಯಾಪ್ತಿಯ ಪದವು ಬಳಿ ದೇಶದ ಮೊದಲ ಗ್ರಾಮೀಣ ಪ್ರದೇಶದ ಎಅಂಆರ್‌ಎಫ್ ಘಟಕ ಸಮಗ್ರ ಘನತ್ಯಾಜ್ಯ ನಿರ್ವಹಣ ಕೇಂದ್ರವನ್ನು ಸೋಮ ವಾರ ಉದ್ಘಾಟಿಸಿ ಅವರು ಮಾತನಾ ಡಿದರು. ಎ. 11ರಂದು ಕೇಂದ್ರ ಸಚಿವರು ದಿಲ್ಲಿ ಯಲ್ಲಿ ದೇಶದ ಎಲ್ಲ ರಾಜ್ಯಗಳ ಗ್ರಾಮೀಣಾ ಭಿವೃದ್ಧಿ ಸಚಿವರ ವಿಶೇಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಇಲ್ಲಿನ ಘಟಕದ ವಿಚಾರ ಪ್ರಸ್ತಾವಿಸಿ, ಸಚಿವೆ ಶೋಭಾ ಕರಂದ್ಲಾಜೆ ಅವರ ಸಹಕಾರ ಪಡೆದು ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ತರಲು ಪ್ರಯತ್ನಿಸುವೆ ಎಂದರು.
Related Articles
Advertisement
ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಪುಸ್ತಕ ಬಿಡುಗಡೆಗೊಳಿಸಿ ಕೇಂದ್ರ, ರಾಜ್ಯ ಸರಕಾರಗಳೆರಡೂ ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ಘಟಕ ನಿರ್ವಹಣೆ ಸಾಧ್ಯ ಎನ್ನುವುದನ್ನು ರಾಜ್ಯ ತೋರಿಸಿಕೊಟ್ಟಿದೆ. ಈಗ ಗ್ರಾಮೀಣ ಭಾಗದಲ್ಲೂ ಯಶಸ್ವಿಯಾಗಿದೆ ಎಂದರು.
ಸಂದೇಶ ರವಾನೆ: ಸುನಿಲ್ :
ಅಧ್ಯಕ್ಷತೆ ವಹಿಸಿದ್ದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಘಟಕದ ಆರಂಭದಲ್ಲಿ ವಿರೋಧ ಗಳಿದ್ದವು. ನನ್ನ ಮನೆಯೇ ಬಳಿಯಲ್ಲೇ ಅನುಷ್ಠಾನ ಮಾಡಿ ಎಂದು ಅಧಿಕಾರಿ ಗಳಿಗೆ ಸಲಹೆ ನೀಡಿದೆ. ಊರಿನ ಜನರು ಸಹಕರಿಸಿದರು. ಈ ಮೂಲಕ ಎಲ್ಲೆಡೆಯೂ ಅನುಷ್ಠಾನ ಮಾಡಬಹುದೆಂಬ ಸಂದೇಶ ದೇಶಕ್ಕೆ ಇಲ್ಲಿಂದ ಹೋಗಿದೆ ಎಂದರು.
ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ಶುಭ ಹಾರೈಸಿದರು.
ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿ ಜಯರಾಮ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ಜಿ.ಪಂ. ಸಿಇಒ ಡಾ| ನವೀನ್ ಭಟ್ ಪ್ರಸ್ತಾವನೆಗೈದರು. ಮುಖ್ಯ ಯೋಜನಾಧಿಕಾರಿ ವಿ. ಶ್ರೀನಿವಾಸ ರಾವ್ ಸ್ವಾಗತಿಸಿ, ಕಾರ್ಕಳ ತಾ.ಪಂ. ಇಒ ಗುರುದತ್ ಎಂ.ಎನ್. ವಂದಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ಸ್ವತ್ಛತಾ ಆ್ಯಪ್, ವಸ್ತುಪ್ರದರ್ಶನ, ಗೋಭರ್ ಧನ್ ಘಟಕ ಅನ್ನು ಉದ್ಘಾಟಿಸಲಾಯಿತು.
ಚಾಲಾಕಿ ಸುನಿಲ್! :
ಕಾರ್ಕಳಕ್ಕೆ ಬಂದಾಗೆಲ್ಲ ನನ್ನಿಂದ ಬಲವಂತವಾಗಿ ಘೋಷಣೆಯನ್ನು ಸಚಿವ ಸುನಿಲ್ ಮಾಡಿಸುತ್ತಾರೆ. ನಮ್ಮ ಕಡೆಯಿಂದ, ಅತ್ತ ಮುಖ್ಯಮಂತ್ರಿಯಿಂದಲೂ ಬಲವಂತವಾಗಿ ಅನುದಾನ ಪಡೆಯುತ್ತಾರೆ. ಸುನಿಲ್ ಹಿಂದಿನ ಜನ್ಮದಲ್ಲಿ ಮಾರ್ವಾಡಿಯಾಗಿದ್ದರೋ ಅನಿಸುತ್ತದೆ ಎಂದು ಚಟಾಕಿ ಹಾರಿಸಿದ ಈಶ್ವರಪ್ಪ, ಹೆಬ್ರಿ ತಾ.ಪಂ ಕಚೇರಿಗೆ 2 ಕೋ.ರೂ. ನೀಡುವ ಭರವಸೆ ನೀಡಿದರು.