Advertisement

ಕೋವಿಡ್‌ 19 ಪರೀಕ್ಷಾ ಪ್ರಯೋಗಾಲಯಕ್ಕೆ ಚಾಲನೆ

06:32 AM Jun 03, 2020 | Lakshmi GovindaRaj |

ಕೋಲಾರ: ಜಿಲ್ಲಾ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲೇ ಕೋವಿಡ್‌ 19 ಪರೀಕ್ಷಾ ಲ್ಯಾಬ್‌ ಆರಂಭವಾಗುತ್ತಿರುವುದರಿಂದ ದಿನಕ್ಕೆ 150 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ಫಲಿತಾಂಶ ಅದೇ ದಿನ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಅಬಕಾರಿ ಸಚಿವ  ಎಚ್‌.ನಾಗೇಶ್‌ ತಿಳಿಸಿದರು.

Advertisement

ನಗರದ ಎಸ್ಸೆನ್ನಾರ್‌ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗದಲ್ಲಿ ಸ್ಥಾಪಿಸಿರುವ ಕೊವಿಡ್‌-19 ಪ್ರಯೋ ಗಾಲಯವ ನ್ನು ಮಂಗಳವಾರ  ಉದ್ಘಾಟಿಸಿದ ಅವರು,ತಮ್ಮ ಹಾಗೂ ಡೀಸಿಯವರ ಮನ ವಿಗೆ ತಕ್ಷಣ ಸ್ಪಂದಿಸಿ ಜಿಲ್ಲೆಗೆ ಪ್ರಯೋಗಾಲಯ ಮಂಜೂರು ಮಾಡಿದ ಸಿಎಂಗೆ ಧನ್ಯವಾದ ಸಲ್ಲಿಸಿದರು. ಕೋವಿಡ್‌ 19 ಪರೀಕ್ಷೆಗೆ ಗಂಟಲು ದ್ರವ ಮಾದರಿಗಳನ್ನು ಬೆಂಗಳೂರಿಗೆ  ಕಳುಹಿಸಬೇಕಾ ಗಿತ್ತು,  ಆದರೆ, ಈಗ ಇಲ್ಲೇ ಲ್ಯಾಬ್‌ ಇದ್ದು, ಗಂಟೆಗೆ 12 ಮಂದಿಯಂತೆ ಒಟ್ಟು ದಿನಕ್ಕೆ 150 ಮಂದಿಯ ಫಲಿತಾಂಶ ಸಿಗಲಿದೆ ಎಂದರು.

ಖಾಸಗಿ ಆಸ್ಪತ್ರೆಗಿಂತ ನಾವು ಕಡಿಮೆ ಇಲ್ಲ: ಮೈಸೂರು ಮಹಾರಾಜರ ಕಾಲದ  ಇತಿಹಾಸ ಹೊಂದಿರುವ ಜಿಲ್ಲಾ ಆಸ್ಪತ್ರೆಯ ವಾತಾವರಣ ನೋಡಿದರೆ ಯಾವುದೇ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಇಲ್ಲ, ಮಾದರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದ ಅವರು, ಇದು ಮುಂದುವರಿಯಬೇಕು, ಇನ್ನಷ್ಟು ಉತ್ತಮ  ಸೇವೆ ನೀಡುವಂತಾಗಲು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿ ದರು.

ಇಷ್ಟು ದಿನ ಕೋವಿಡ್‌ 19 ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿ ವರದಿಗಾಗಿ ಕನಿಷ್ಠ 2 ದಿನ ಕಾಯಬೇಕಿತ್ತು. ವೀಡಿಯೋ  ಕಾನ್ಫರೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಪ್ರಯೋಗಾಲಯ ಮಂಜೂರು ಮಾಡುವಂತೆ ನಾನು ಹಾಗೂ ಜಿಲ್ಲಾಧಿಕಾರಿಗಳು ಸಿಎಂಗೆ ಮನವಿ ಮಾಡಿದ ತಕ್ಷಣ ಮಂಜೂ ರಾತಿ ಸಿಕ್ಕಿತು. ಜಿಲ್ಲೆಯ ಪಾಲಿಗಿಂದು ಶುಭದಿನ ಎಂದು ಹರ್ಷ  ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಈವರೆಗೆ 26 ಸೋಂಕಿತ ಕೇಸ್‌: ಜಿಲ್ಲೆಯಲ್ಲಿ ಈವರೆಗೆ ಒಟ್ಟು 28 ಮಂದಿಗೆ ಕರೊನಾ ಸೋಂಕು ದೃಢಪಟ್ಟು ಸೋಮ ವಾರ  ದವರೆಗೆ 11 ಜನ ಬಿಡುಗಡೆಹೊಂದಿ ದ್ದಾರೆ. ಇನ್ನೂ 17 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಆದಷ್ಟು  ಶೀಘ್ರ ಗುಣಮುಖ ರಾಗುವ ಭರವಸೆಯಿದೆ. ನಮ್ಮ ಟೀಂ ಅಷ್ಟು ಸಮರ್ಥವಾಗಿದೆ. ಜಿಲ್ಲಾಡಳಿತ, ವೈದ್ಯ ಸಿಬ್ಬಂದಿ, ಕೋವಿಡ್‌ 19 ವಾರಿಯರ್ಸ್‌ ಮುತುವರ್ಜಿಯಿಂ ದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನುಡಿದರು.

Advertisement

ಜಿಲ್ಲಾಧಿಕಾರಿ ಸಿ. ತ್ಯಭಾಮ ಮಾತನಾಡಿ, ಪ್ರಯೋಗಾಲಯದಲ್ಲಿ ಪ್ರತಿ ಗಂಟೆಗೆ 12 ಮಾದ ರಿಗಳ ವರದಿ ಕೈ ಸೇರುವುದರಿಂದ ಸೋಂಕಿ ತರ ಪ್ರಾಥಮಿಕ ಸಂಪರ್ಕ ಪತ್ತೆ  ಹಚ್ಚಲು, ಕಂಟೇನ್ಮೆಂಟ್‌ ಜೋನ್‌ ತಕ್ಷಣದಲ್ಲಿ ಕ್ರಮ ವಹಿಸಲು ಸಾಧ್ಯವಾಗುತ್ತದೆ  ಎಂದರು. ಎಸಿ ಸೋಮಶೇಖರ್‌, ಡಿಎಚ್‌ಒ ಡಾ.  ಎಸ್‌.ಎನ್‌.ವಿಜಯಕುಮಾರ್‌, ಜಿಲ್ಲಾ ಸರ್ಜನ್‌ ಡಾ.ಎಸ್‌.ಜಿ.ನಾರಾಯಣಸ್ವಾಮಿ, ತಹಶೀಲ್ದಾರ್‌ ಶೋಭಿತಾ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್‌, ಆರೋಗ್ಯ ಅಧಿಕಾರಿಗಳು  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next