ಹುಬ್ಬಳ್ಳಿ: ರಾಷ್ಟ್ರೀಯ ಸೇವಾ ಭಾರತಿ ಸೇವಾ ಸಂಗಮ ರಾಜ್ಯ ಸಮಾವೇಶಕ್ಕೆ ತಯಾರಿ ಕಾರ್ಯ ನಡೆಯುತ್ತಿದ್ದು, ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಡಿ. 1ರಂದು ಬೆಳಗ್ಗೆ 11:15 ಗಂಟೆಗೆ ಪಾಂಡಿಚೇರಿ ಲೆμrನೆಂಟ್ ಗರ್ವನರ್ ಡಾ| ಕಿರಣ ಬೇಡಿ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾವೇಶ ಸ್ವಾಗತ ಸಮಿತಿ ಕಾರ್ಯದರ್ಶಿ ಗೋವಿಂದಪ್ಪ ಗೌಡಪ್ಪಗೋಳ, ಡಿ. 1-3ರ ವರೆಗೆ ಸಮಾವೇಶ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಸಂಘಟನಾ ಕಾರ್ಯದರ್ಶಿ ರಾಕೇಶ ಜೈನ್ ಸಮಾವೇಶದ ಆಶಯ ನುಡಿ ನುಡಿಯಲಿದ್ದು,
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದರು. ಡಿ. 2ರಂದು ಯುವ ಮತ್ತು ಮಹಿಳಾ ಸಮಾವೇಶ ನಡೆಯಲಿದೆ. ಸಂಜೆ 5:30 ಗಂಟೆಗೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು,
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ್ಯವಾಹ ಸುರೇಶ ಜೋಶಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಾವೇಶದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಸಮಾವೇಶಕ್ಕೆ 2 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಡಿ. 3ರಂದು ವೈದ್ಯರ ಸಂವಾದ ನಡೆಯಲಿದ್ದು,
100ಕ್ಕೂ ಅಧಿಕ ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಸೇವಾ ಸಂಗಮಕ್ಕಾಗಿ ಗೋಕುಲ ಗಾರ್ಡನ್‌ನಲ್ಲಿ ಮುಖ್ಯ ವೇದಿಕೆ ಅಲ್ಲದೆ, ಗುಂಪು ಚರ್ಚೆಗೆ ಪ್ರತ್ಯೇಕ ವೇದಿಕೆ ರೂಪಿಸಲಾಗಿದೆ. ಅದೇ ರೀತಿ ಮಾಹಿತಿ ಪ್ರದರ್ಶನ, ಮಳಿಗೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು. ಸೇವಾ ಭಾರತಿ ದಕ್ಷಿಣ ಭಾರತ ಸಂಯೋಜಕ ಶ್ರೀಧರ ಸಾಗರ ಇದ್ದರು.